ಕುಮಟಾ – ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ ಆಗಿರುವ ಕುಮಟಾ ತಾಲೂಕು ಹಲವು ವಿಶೇಷತೆಗಳ ಆಗರ. ಆಧುನೀಕತೆಯ ಭರಾಟೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿರುವ ಪಟ್ಟಣ, ವೈವಿದ್ಯಮಯ ತಾಣಗಳಲ್ಲಿ ಒಂದು.

ಪಟ್ಟಣದ ಐಸಿಐಸಿಐ ಬ್ಯಾಂಕ್ ಪಕ್ಕದಲ್ಲಿದ್ದ ಸುಮಾರು ಎರಡೂವರೆ ಶತಮಾನ ಬಾಳಿ ಬದುಕಿದ್ದ ಬೃಹತ್ ಅರಳಿಮರ (ಅಶ್ವಥ್ ವೃಕ್ಷ ) ಪರಂಪರೆ ಹಾಗೂ ಜನ ಜೀವನದ ಕೊಂಡಿಗೆ ಸಾಕ್ಷಿ ಎಂಬಂತೆ ಇತ್ತು.

RELATED ARTICLES  ಕುಮಟಾದಲ್ಲಿ 2 ನೇ ಭಾರಿ ಬಿಳಿ ಹೆಬ್ಬಾವು ಪ್ರತ್ಯಕ್ಷ | ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವು ಉರಗ ತಜ್ಞ ಸ್ನೇಕ್ ಪವನ್ ರಿಂದ ರಕ್ಷಣೆ

ಸೋಮವಾರ ರಾತ್ರಿ ಸುರಿದ ಬಾರೀ ಮಳೆಗೆ ಎರಡೂವರೆ ಶತಮಾನ ಬಾಳಿ ಬದುಕಿದ್ದ ಬೃಹತ್ ಅರಳಿಮರ (ಅಶ್ವಥ್ ವೃಕ್ಷ ) ಬೇರು ಸಮೇತ ಕಿತ್ತು ಧರೆಗುರುಳಿರುವುದು ಬೇಸರದ ಸಂಗತಿಯಾಗಿದೆಮ

1775 ರಲ್ಲಿ ಗೊವಿಂದ ಕಾಮತ್ ಎನ್ನುವವರು ಈ ಮರಕ್ಕೆ ಧಾರ್ಮಿಕ ವಿಧಿವಿಧಾನದಂತೆ ಉಪನಯನ ಮಾಡಿದ್ದರು ಎನ್ನುವ ಐತಿಹ್ಯ ಉಳ್ಳ ಈ ಮರ ಅಲ್ಲಿಂದ ಇಲ್ಲಿಯವರೆಗೂ ಕುಮಟಾ ಪಟ್ಟಣದ ಪ್ರತಿಯೊಂದು ಬೆಳೆವಣಿಗೆಗೂ ಮೂಕಸಾಕ್ಷಿಯಾಗಿ ನಿಂತಿತ್ತು.

RELATED ARTICLES  ಲಯನ್ಸ್ ಅಧ್ಯಕ್ಷರಾಗಿ ದಾಮೋದರ ಭಟ್ : ಜು 9 ಕ್ಕೆ ಪದಗ್ರಹಣ.

ಹಲವು ತಲೆಮಾರುಗಳು ಭಕ್ತಿಯಿಂದ ಆರಾಧಿಸಿದ್ದ ಮರ ಕಿತ್ತು ಇನ್ನಿಲ್ಲವಾಗಿದ್ದು ಹಲವರ ಬೇಸರಕ್ಕೆ ಕಾರಣವಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಈ ಘಟನೆ ನಡೆದಿದ್ದು ಕೆಲಕಾಲ ಸ್ಥಳದಲ್ಲಿ ಓಡಾಟ ಕಷ್ಟವಾಗಿತ್ತು.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.