ಹೊನ್ನಾವರ : ಮಗುವಿನ ಜೊತೆಗೆ ತನ್ನ ತಾಯಿಯ ಮನೆಗೆ ಬಂದವಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಮಹಿಳೆಯ ಹುಡುಕಾಟದ ಪ್ರಕ್ರಿಯೆ ನಡೆದಿದೆ.
ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಕುದಾಮೊಹಲ್ಲಾ ಕೆಪ್ಪನ ಹಿತ್ತಲದಲ್ಲಿರುವ ತನ್ನ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳು ಎರಡು ವರ್ಷದ ಮಗುವಿನೊಂದಿಗೆ ಹೊರಗೆ ಹೋಗಿದ್ದವಳು ಮನೆಗೆ ಮರಳಿಲ್ಲ ಎಂದು ಹೇಳಲಾಗುತ್ತಿದ್ದು, ಈಬಗ್ಗೆ ಕಾಣೆಯಾಗಿದ್ದಾಳೆನ್ನಲಾದ ಮಹಿಳೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲದ ಆಫೀಫಾ ಸಲೀಂ ಮುಲ್ಲಾ ಎಂಬಾಕೆಯನ್ನು ಕೆಲ ವರ್ಷಗಳ ಹಿಂದೆ ಶಿರೂರಿಗೆ ಮದುವೆಮಾಡಿಕೊಡಲಾಗಿತ್ತು. ಇದೀಗ ಆಕೆ ತಾಯಿಯ ಮನೆಗೆ ಬಂದವಳು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಆಫೀಫಾ ಸಲೀಂ ಮುಲ್ಲಾ ತಾಯಿಯ ಮನೆಗೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದಿದ್ದ ಈಕೆ ದಿನಾಂಕ 12-07-2021 ರಂದು
ಮಗುವಿನ ಜೊತೆ ಮನೆಯಿಂದ ಹೊರಗೆ ಹೋದವಳು ವಾಪಸ್ಸು ಮನೆಗೆ ಬಂದಿಲ್ಲ ಎಂದು ಆಪೀಫಾಳ ತಂದೆ ಸುಲೇಮಾನ್ ಫಕೀರಾ ದಾವಲ್ ಮಂಕಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಾರೆ.
ಈಕೆ ಎಲ್ಲಿಯಾದರೂ ಕಂಡಲ್ಲಿ ಎಲ್ಲಿಯಾದರೂ ಕಾಣಿಸಿದಲ್ಲಿ ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. (ಮಂಕಿ ಪೊಲೀಸ್ ಠಾಣೆ 08387
–257886)
5 ಪೂಟ್ ಎತ್ತರವಿರುವ ಆಪೀಪಾ ಗೋದಿ ಮೈ ಬಣ್ಣದವಳಾಗಿದ್ದು ಎರಡೂ ಕೈಗಳಿಗೆ ಮೆಹಂದಿ ಹಚ್ಚಿಕೊಂಡಿದ್ದಾಳೆ. ಎರಡು ವರ್ಷದ ಮಗ ಜೊತೆಯಲ್ಲಿಯೇ ಇದ್ದು ಚೂಡಿದಾರ್ ಧರಿಸಿದ್ದಾಳೆ ಎನ್ನಲಾಗಿದೆ.