ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ನೇಮಕಾತಿ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.
ಒಟ್ಟು 5830 ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದ್ದು, ಕ್ಲೆರಿಕಲ್ ಕೇಡರ್ ಹುದ್ದೆಗಳಿಗಾಗಿ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ.
ಪ್ರಮುಖ ಮಾಹಿತಿಗಳು ಇಲ್ಲಿದೆ
- ವಿದ್ಯಾರ್ಹತೆ; ಯಾವುದೇ ಅಂಗೀಕೃತ ವಿವಿಯಿಂದ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
- ವಯೋಮಿತಿ ; ಅನ್ವಯವಾಗುವಂತೆ ಕನಿಷ್ಠ 20 ವರ್ಷ, ಗರಿಷ್ಠ28ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ
- ವೇತನ ; INR 13,000 to 20,000 /Month
- ಆರಂಭಿಕ ದಿನಾಂಕ; 12-07-2021
- ನೇಮಕಾತಿ ಪ್ರಕ್ರಿಯೆ ಮೂಲಕ ಕರ್ನಾಟಕದಲ್ಲಿ 407 ಕ್ಲೆರಿಕಲ್ ಕೇಡರ್‌ಗಳನ್ನು ಭರ್ತಿ ಮಾಡಲಾಗುತ್ತದೆ.
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ; 1-08-2021
- ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ : ಜುಲೈ 12 ರಿಂದ ಆಗಸ್ಟ್ 01, 2021 ರವರೆಗೆ.
- ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 01-08-2021
- ಪೂರ್ವ ಭಾವಿ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಆಗಸ್ಟ್, 2021
- ಪೂರ್ವಭಾವಿ ಪರೀಕ್ಷೆ ದಿನಾಂಕ : ಆಗಸ್ಟ್ 28, 29 ಮತ್ತು ಸೆಪ್ಟೆಂಬರ್ 04, 2021.
- ಪ್ರಿಲಿಮಿನರಿ ಪರೀಕ್ಷೆ ಫಲಿತಾಂಶ ದಿನಾಂಕ: ಸೆಪ್ಟೆಂಬರ್ / ಅಕ್ಟೋಬರ್ 2021
- ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಅಕ್ಟೋಬರ್ 2021
- ಮುಖ್ಯ ಪರೀಕ್ಷೆ ದಿನಾಂಕ : 31-10-2021
- ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ : ಏಪ್ರಿಲ್ 2022
- ಅಪ್ಲಿಕೇಶನ್ ಶುಲ್ಕ ರೂ.850. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175. ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
- web site; https://www.ibps.in/