ಕಾರವಾರ: ಉತ್ತರಕನ್ನಡ ಜಿಲ್ಲೆಯ ನೂತನ ಎಸ್.ಪಿ ಯಾಗಿ ವರ್ತಿಕಾ ಕಟಿಯಾರ್ ನೇಮಕಗೊಂಡಿದು. ಜಿಲ್ಲೆಗೆ ಮೊದಲ ಮಹಿಳಾ ಎಸ್.ಪಿಯವರ ನೇಮಕವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಎಸ್ ಪಿ ಯಾಗಿ ವರ್ತಿಕಾ ಕಟಿಯಾರ್ ನೇಮಕಗೊಂಡಿದ್ದಾರೆ.

ಸದ್ಯ ಇವರು ರಾಜ್ಯ ಅಪರಾಧ ದತ್ತಾಂಶ ವಿಭಾಗದ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2010ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು 2011ರಲ್ಲಿ ವಿವಾಹವಾಗಿದ್ದರು. ಕೊಡಗು, ಧಾರವಾಡ ಹಾಗೂ ಹುಬ್ಬಳ್ಳಿಯ ಎಸ್ಪಿ ಆಗಿ, ಕಾರ್ಯನಿರ್ವಹಿಸಿದ್ದರು. ಮಹಾರಾಷ್ಟ್ರ ಮೂಲದ 2009 ನೇ ಬ್ಯಾಚ್ ನ ಐಎಫ್ಎಸ್ ( ಫಾರಿನ್ ಸರ್ವೀಸ್ ) ಅಧಿಕಾರಿ ನಿತೀನ್ ಸುಭಾಸ್ ಅವರನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದರು, ನಿತಿನ್ ಕೊಲಂಬೋ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ್ದರು.

RELATED ARTICLES  ಗೋಪರಿವಾರ ಮುಳ್ಳೇರಿಯಾ ಮಂಡಲ ಗುಂಪೆ ವಲಯ‌ ಅಮೃತಪಥ ಕಾರ್ಯಕ್ರಮ

ತಕ್ಷಣದಿಂದ ಬರುವಂತೆ ಈ ಸರಕಾರ ಆದೇಶ ಹೊರಡಿಸಿದೆ. ಸದ್ಯಕ್ಕೆ ಶಿವಪ್ರಕಾಶ್ ದೇವರಾಜು ಅವರಿಗೆ ಯಾವುದೇ ಸ್ಥಾನಕ್ಕೆ ನಿಯೋಜಿಸಿಲ್ಲ. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ನೂತನ ಎಸ್ ಪಿಯಾಗಿ ವರ್ತಿಕಾ ಕಟಿಯಾರ್ ಅಧಿಕಾರ ಸ್ವೀಕರಿಸಲಿದ್ದಾರೆ.

RELATED ARTICLES  ಬಸ್ ಗೆ ಗುದ್ದಿದ ಕಾರು : ಮೂವರಿಗೆ ಪೆಟ್ಟು

ಉತ್ತರಕನ್ನಡದಲ್ಲಿ ಅತ್ಯಂತ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡ ಶಿವಪ್ರಕಾಶ್ ದೇವರಾಜು, ತಮ್ಮ ಕಾರ್ಯವೈಖರಿ ಮೂಲಕ ಜನಮನಗೆದ್ದಿದ್ದರು.