ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು ಕೇವಲ 71 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದಿನ ಹೆಲ್ತ ಬುಲೆಟಿನ್ ಪ್ರಕಾರ ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಹಿಂದಿನ ಹೆತ್ತ್ ಬುಲೆಟಿನ್ ಪ್ರಕಾರ ಉತ್ತರಕನ್ನಡದಲ್ಲಿ ಕೊಂಚಮಟ್ಟಿಗೆ ಕೊರೋನಾ ಏರಿಕೆ ಕಂಡಿದ್ದು 50 ರ ಸನಿಹ ಬರುತ್ತಿದ್ದ ಪ್ರಕರಣ ಇಂದು 71ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ 6, ಅಂಕೋಲಾದಲ್ಲಿ 12, ಕುಮಟಾದಲ್ಲಿ 19, ಹೊನ್ನಾವರ 17, ಭಟ್ಕಳದಲ್ಲಿ 3, ಶಿರಸಿಯಲ್ಲಿ 7, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 2, ಮುಂಡಗೋಡ 2, ಹಳಿಯಾಳದಲ್ಲಿ 2, ಮತ್ತು ಜೋಯಿಡಾದಲ್ಲಿ 0 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಇನ್ನು ಮುಂದೆ ಮುಜರಾಯಿ ಇಲಾಖೆಗೆ.!

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 399 ಆಗಿದ್ದು, ಅವರಲ್ಲಿ 40 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 359 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 2, ಅಂಕೋಲಾ‌ 6, ಕುಮಟಾ 7, ಹೊನ್ನಾವರ 6, ಭಟ್ಕಳ 2, ಶಿರಸಿ 16, ಸಿದ್ದಾಪುರ 0, ಯಲ್ಲಾಪುರ 3, ಮುಂಡಗೋಡ 4, ಹಳಿಯಾಳ 0, ಜೋಯ್ಡಾ 1 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 35 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಸಂತಸದ ಸುದ್ದಿ: ಐಟಿ ರಿಟರ್ನ್ಸ್ ಅಂತಿಮ ದಿನಾಂಕ ಅಕ್ಟೋಬರ್ 15ಕ್ಕೆ ವಿಸ್ತರಣೆ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.