ಹೊನ್ನಾವರ : ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಗೂ ಕೊರೋನಾ ಲಸಿಕೆಯ ಮಹತ್ವ ಸಾರುವ ಮೂಲಕ ಅದರ ಸದುಪಯೋಗ ಪಡೆಯಲು ಪ್ರೇರೇಪಿಸುವ ಜೊತೆಗೆ ವ್ಯಾಕ್ಸಿನ್ ಪಡೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿಯವರ ಮುಂದಾಳತ್ವದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿನೂತನ ಕಾರ್ಯಕ್ರಮವನ್ನು ಸಂಯೋಜಿಸಲಾಗಿದ್ದು ಹಾಡು,ನೃತ್ಯ, ಬರಹ, ಭಾಷಣ, ನಾಟಕ ಈ ಯಾವುದೇ ಪ್ರಕಾರದಲ್ಲಿಯೂ ಎರಡು ನಿಮಿಷದ ವಿಡಿಯೋ ಮಾಡಿ ವ್ಯಾಕ್ಸಿನೇಟ್ ಕುಮಟಾ ಹೊನ್ನಾವರ ಹ್ಯಾಷ್ ಟ್ಯಾಗ್ ನೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಬಹುದು.

ಫೇಸ್ಬುಕ್, ಟ್ವಿಟರ್ , ವಾಟ್ಸಾಪ್, ಇನ್ಸ್ಟಾಗ್ರಾಂ, ಯುಟ್ಯೂಬ್ ಸೇರಿದಂತೆ ಯಾವುದೇ ಬಗೆಯ ಸಾಮಾಜಿಕ ಜಾಲತಾಣದಲ್ಲಿ ಎರಡು ನಿಮಿಷದ ವಿಡಿಯೋ ಅಪ್ ಲೋಡ್ ಮಾಡಬಹುದು. ಈ ಲಿಂಕ್ ಅನ್ನು ವ್ಯಾಕ್ಸಿನೇಟ್ ಕುಮಟಾ ಹೊನ್ನಾವರ ವೆಬ್ ಪೇಜ್ ಸಂಪೂರ್ಣ ಮಾಹಿತಿಯೊಂದಿಗೆ ಅಪ್ಲೋಡ್ ಮಾಡಿದ ನಂತರ ಅತ್ಯುತ್ತಮವಾದ 10 ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ 10 ಸ್ಮಾರ್ಟ ಫೋನ್ ನೀಡಲು ನಿರ್ಧರಿಸಲಾಗಿದೆ.

RELATED ARTICLES  ಅಕ್ರಮವಾಗಿ ಇಟ್ಟಿದ್ದ 20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಅಪಾರ ಪ್ರಮಾಣದ ಮದ್ಯ ವಶ.

ರವಿ ಶೆಟ್ಟಿ ಕವಲಕ್ಕಿ ಅವರು ಇಂದು ಹೊನ್ನಾವರ ಪಟ್ಟಣದ ಪ್ರಭಾತ್ ನಗರದ ತಮ್ಮ ನಿವಾಸದಲ್ಲಿ ಈ ವೆಬ್ ಪೇಜಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಎನ್ ಸುಬ್ರಹ್ಮಣ್ಯ ಹಾಜರಿದ್ದರು.

ಕೊರೋನಾದಿಂದ ಜನರು ತತ್ತರಿಸಿದ್ದು, ಮೂರನೆಯ ಅಲೆಯ ಮುನ್ಸೂಚನೆ ನೀಡಲಾಗಿದೆ. ಮುಂಜಾಗೃತಿಗಾಗಿ ಹಾಗೂ ವ್ಯಾಕ್ಸಿನ್ ಪಡೆಯಲು ಪ್ರೇರೇಪಿಸಿ ತನ್ಮೂಲಕ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜನತೆಗೆ ಸಂದೇಶ ನೀಡಲು ಈ ಕಾರ್ಯಕ್ರಮ ಆಯೋಜಿಸಿದ್ದು ಮಕ್ಕಳು ತಮ್ಮ ಕ್ರಿಯಾಶೀಲತೆ ಬಳಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹಾಗೂ ಬಹುಮಾನ ಗೆಲ್ಲಬಹುದು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

RELATED ARTICLES  ಸಿದ್ದರಾಮಯ್ಯ ಅವರ ಆ್ಯಪ್ ಪ್ಲೇ ಸ್ಟೋರ್‌ನಿಂದ ಡಿಲೀಟ್.

ಕುಮಟಾ ಹಾಗೂ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಕ್ರಿಯಾಶೀಲತೆ ಬಳಸಿ ಕರೋನಾ ಕುರಿತಾಗಿ ಜಾಗೃತಿ ಹಾಗೂ ವ್ಯಾಕ್ಸಿನ್ ಪಡೆಯಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿಡಿಯೋಗಳನ್ನು ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಜುಲೈ 19 ರಿಂದ ಅಗಸ್ಟ್ 19 ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ರಾಜ್ಯ ಕಾಂಗ್ರೆಸ್ ಸೂಚನೆಯ ಮೇರೆಗೆ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಅವರು ಮಾಡುತ್ತಿರುವ ಈ ವಿನೂತನ ಪ್ರಯತ್ನ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಹಾಗೂ ವಿದ್ಯಾರ್ಥಿಗಳಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟು ಕರೋನಾ ಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ರವಿ ಶೆಟ್ಟಿ ಕವಲಕ್ಕಿ ಅವರ ಈ ಹೊಸ ಪ್ರಯೋಗ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳು ಕೇಳಿಬರುತ್ತಿದೆ.