ಶಿರಸಿ: ಚಾಕ್ಲೆಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಆದರೆ ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಕ್ವಿಂಟಲ್ ಗೂ ಹೆಚ್ಚು ತೂಕದ ಚಾಕಲೇಡ್ ಅನ್ನು ನಡು ರಸ್ತೆಯಲ್ಲಿ ಎಸೆದುಹೋದ ಘಟನೆಯಿದು.
ಆದರೆ ಸುಖಾಸುಮ್ಮನೆ ಈ ಚಾಕಲೇಟ್ ಎಸೆದಿಲ್ಲ. ಇದೆಲ್ಲವೂ ಅವಧಿ ಮೀರಿದ ಚಾಕಲೇಟ್. ಅವಧಿ ಮುಗಿದ ಕ್ವಿಂಟಲ್ ಗೂ ಹೆಚ್ಚು ತೂಕದ ಚಾಕಲೇಡ್ ಅನ್ನು ರಸ್ತೆಯಲ್ಲಿ ಎಸೆದುಹೋದ ಈ ಘಟನೆ ನಡೆದಿರುವುದು ಶಿರಸಿ ನಗರದ ಹುಡ್ಲಮನೆ ರಸ್ತೆಯಲ್ಲಿ.
ಕರೋನಾ ಲಾಕ್ ಡೌನ್ ನಿಂದ ಚಾಕಲೇಟ್ ಗಳು ಮಾರುಕಟ್ಟೆಯಲ್ಲಿ ಬಿಕರಿಯಾಗಿಲ್ಲ. ಈ ಕಾರಣದಿಂದ ಅವಧಿ ಮುಗಿದಿದೆ. ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್ ಹೊಂದಿದ ಚಾಕ್ಲೆಟ್ ಇದಾಗಿದ್ದು ಇದನ್ನು ನಗರಸಭೆಯ ಕಸ ವಿಲೇವಾರಿಗೆ ನೀಡದೇ ಈ ಚಾಕ್ಲೇಟ್ ಕಂಪನಿಯ ಡೀಲರ್ ಇವುಗಳನ್ನು ಹೀಗೆ ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ.
ಇನ್ನು ಹೀಗೆ ಎಸೆದ ಚಾಕ್ಲೇಟ್ ಅನ್ನು ದನಗಳು ತಿಂದರೆ ,ಇನ್ನು ಕೆಲವು ಮಕ್ಕಳು ಎತ್ತಿಕೊಂಡು ಹೋಗಿದ್ದಾರೆ. ಇನ್ನು ರಾಶಿಗಟ್ಟಲೇ ಈ ಚಾಕಲೇಟ್ ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಪಕ್ಕದಲ್ಲೇ ಕೆರೆ ಸಹ ಇರುವುದರಿಂದ ಮಳೆಯಲ್ಲಿ ಈ ನೀರಿಗೆ ಸೇರಿ ಮಲೀನವಾಗಲಿದೆ.ಹೀಗಾಗಿ ಸ್ಥಳೀಯ ಜನರು ಈ ಚಾಕ್ಲೇಟ್ ಕಂಪನಿ ಡೀಲರ್ ವಿರುದ್ಧ ನಗರಸಭೆಗೆ ದೂರು ಸಹ ನೀಡಿದ್ದಾರೆ.