ಭಟ್ಕಳ: ಉತ್ತರಕನ್ನಡದಲ್ಲಿ ಆಗಾಗ ಕೇಳಿ ಬರುತ್ತಿದ್ದ ಅಕ್ರಮ ಗೋ ಸಾಗಾಟ ಪ್ರಕರಣ ಇಂದು ಮತ್ತೆ ಸದ್ದು ಮಾಡಿದೆ. ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಮುರ್ಡೇಶ್ವರದ ಬಸ್ತಿಯ ಸಮೀಪ ಅಕ್ರಮವಾಗಿ ಇನೋವಾ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಪೊಲೀಸರು ವಾಹನ ಸಮೇತ ಜಾನುವಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾದ ಘಟನೆ ನಡೆದಿದೆ.
ಹಿಂಸಾತ್ಮಕವಾಗಿ ಯಾವುದೇ ದಾಖಲೆ ಇಲ್ಲದೆ ಇನ್ನೋವಾ ಕಾರಿನಲ್ಲಿ ಸುಮಾರು 30,ಸಾವಿರ ಮೌಲ್ಯದ 3 ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಮುರುಡೇಶ್ವರ ಪೋಲಿಸ ಠಾಣೆಯ ವ್ಯಾಪ್ತಿಯ ಬಸ್ತಿಯ ಸಮೀಪ ಪೊಲೀಸ್ ಪೊಲೀಸರು ವಾಹನ ಅಡ್ಡಗಟ್ಟಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ವಾಹನ ಅಡ್ಡಗಟ್ಟಿದ ವೇಳೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದು , ವಾಹನ ಸಮೇತ ಜಾನುವಾರನ್ನು ಮುರುಡೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಜಾವುವಾರುಗಳ ಅಕ್ರಮಸಾಗಾಟ ಪ್ರಕರಣ ಪದೇ ಪದೇ ಸುದ್ದಿಯಾಗುತ್ತಿದ್ದು, ಪೊಲೀಸರು ಸಮರ್ಥವಾಗಿ ಈ ಪ್ರಕರಣ ಬೇಧಿಸುತ್ತಿದ್ದಾರೆಯಾದರೂ ಇಂತಹ ಪ್ರಕರಣಗಳು ಪುನರಾವರೆಆಗುತ್ತಿರುವದು ಇಲಖೆಗೆ ತಲೆನೋವಾಗಿ ಪರಿಣಮಿಸಿದೆ.