ಕುಮಟಾ: ತಾಲೂಕಿನ ಹಿರೇಗುತ್ತಿ ಹಿರೆಹೊಸಬಾ ಸ್ಟೋನ್ ಕ್ರಷರ್ ನಲ್ಲಿ ವಸ್ತುಗಳ ಕಳ್ಳತನ ನಡೆದಿದ್ದ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತ್ವರಿತ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಸ್ಟೋನ್ ಕ್ರಷರ್‌ನಲ್ಲಿನ ಬಿಡಿ ವಸ್ತುಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.

RELATED ARTICLES  ಶಿವಕುಮಾರ್‌ ಒಡೆತನದ ನ್ಯಾಷನಲ್‌ ಹಿಲ್‌ವೀವ್‌ ಶಾಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 24 ಮಕ್ಕಳಿಗೆ ಪ್ರವೇಶ ನಿರಾಕರಿ­ಸಿದೆ.

ಬಂಧಿತ ಆರೋಪಿಗಳನ್ನು ಹಿರೇಗುತ್ತಿಯ ಎಣ್ಣೆಮಡಿಯ ನಿವಾಸಿಗಳಾದ ಮಂಜುನಾಥ್ ಪಟಗಾರ, ಚಂದ್ರಕಾಂತ್ ಎಂಕಣ್ಣ ಹಳ್ಳೇರ್, ಹರೀಶ್ ಹಳ್ಳೇರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಸುಮಾರು 2 ಲಕ್ಷ ಮೌಲ್ಯದ ಬಿಡಿ ಭಾಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂಬ ಮಾಹಿತಿ ಇದೆ.

RELATED ARTICLES  ಉತ್ತರಪ್ರದೇಶವನ್ನು ರಾಮರಾಜ್ಯವಾಗಿಸುವುದೇ ನಮ್ಮ ಕನಸು: ಯೋಗಿ ಆದಿತ್ಯನಾಥ್