ಸಿದ್ದಾಪುರ: ಡಾ. ಗಜಾನನ ಶರ್ಮಾ ಅವರ ಚೆನ್ನಾಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭ ಜು.17 ಮಧ್ಯಾಹ್ನ 3 ಗಂಟೆಯಿಂದ ರಾಘವೇಂದ್ರ ಮಠ ಸಭಾಭವನದಲ್ಲಿ ಸಿದ್ದಾಪುರದ ಪ್ರಯೋಗ ಸ್ವಯಂಸೇವಾ ಸಂಸ್ಥೆ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ನಡೆಯಲಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪುಸ್ತಕ ಬಿಡುಗಡೆ ಮಾಡುವರು. ಚಿಂತಕ ಹಾಗೂ ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರು ಅಧ್ಯಕ್ಷತೆ ವಹಿಸುವರು. ಕೃತಿ ಕುರಿತು ಚಿಂತಕ ಹಾಗೂ ಪ್ರಗತಿಪರ ಕೃಷಿಕ ದೇವೇಂದ್ರ ಬೆಳೆಯೂರು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃತಿಕಾರರಾದ ಡಾ. ಗಜಾನನ ಶರ್ಮಾ, ಖ್ಯಾತ ಲೇಖಕ ಡಾ.ಬೈರಮಂಗಲ ರಾಮೇಗೌಡ, ಅಂಕಿತ ಪುಸ್ತಕಾದ ಪ್ರಕಾಶ ಕಂಬತ್ತಳ್ಳಿ ಪಾಲ್ಗೊಳ್ಳಲಿದ್ದಾರೆ.
ಚಿಂತಕ ವಿಜಯ ಹೆಗಡೆ ದೊಡ್ಡನೆ, ಉದ್ಯಮಿ ಕೆ.ಜಿ.ನಾಗರಾಜ, ಬರಹಗಾರ ಗಂಗಾಧರ ಕೊಳಗಿ, ಸಾಹಿತ್ಯಾಸಕ್ತ ಸಿ.ಎಸ್.ಗೌಡರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.