ಹೊನ್ನಾವರ: ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಒಂದೆಡೆ ನೀರು ತುಂಬಿಸಿದರೆ ಇನ್ನೊಂದೆಡೆ ಗುಡ್ಡ ಕುಸಿತದಂತಹ ಆಘಾತಕಾರಿ ಸುದ್ದಿಗಳು ವರದಿಯಾಗುತ್ತಿದೆ.
ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಗುಡ್ಡ ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಯ್ಯಾವುದೆ ಅನಾಹುತ ಸಂಬವಿಸಿಲ್ಲ. ಕಾವೂರಿನ ಸೈನಿಕರಾದ ಸುರೇಶ ಗೌಡರ ಮನೆಯ ಹತ್ತಿರದ ಗುಡ್ಡ ಕುಸಿದಿದ್ದು ದೊಡ್ಡ ಅನಾಹುತವೊಂದು ಅದೃಷ್ಟವಷಾತ್ ತಪ್ಪಿದೆ ಎಂದು ಸ್ಥಳೀಯರು ಸತ್ವಾಧಾರ ನ್ಯೂಸ್ ಗೆ ವರದಿ ಮಾಡಿದ್ದಾರೆ.
ಗುಡ್ಡ ಕುಸಿತದಿಂದ ಬೃಹದಾಕಾರಾದ ಬಂಡೆ ಉರುಳಿ ಸೈನಿಕರಾದ ಸುರೇಶ ಗೌಡರ ಮನೆಯ ಅಂಗಳಕ್ಕೆ ಬಂದು ಬಿದ್ದಿದೆ. ಇದರಿಂದಾಗಿ ಮನೆಯವರು ಆತಂಕಗೊoಡಿದ್ದಾರೆ. ತುಳುನಾಡಿನಲ್ಲಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಗುಡ್ಡ ಕಳೆದ ವರ್ಷವು ಸ್ವಲ್ಪ ಪ್ರಮಾಣದಲ್ಲಿ ಕುಸಿದಿತ್ತು. ಅಧಿಕಾರಿಗಳಿಗೆ ಇದನ್ನು ತಿಳಿಸಲಾಗಿದ್ದರೂ ಏನೂ ಪ್ರಯೋಜವಾಗಿಲ್ಲ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಹೊನ್ನಾವರ ತಹಶೀಲ್ದಾರ್ ಬಂದು ಪಂಚನಾಮೆ ಮಾಡಿಕೊಂಡು ಹೋಗಿದ್ದರು. ಎರಡು ಬಂಡೆಗಳು ಉರುಳಿ ಮನೆಯ ಅಂಗಳಕ್ಕೆ ಬಂದು ಬಿದ್ದಿದ್ದು ಕುದಲೆಳೆಯ ಅಂತರದಿಂದ ದೊಡ್ಡ ಅನಾಹುತ ತಪ್ಪಿದೆ. ಇಲ್ಲಿಗೆ ಬರುವಂತ ಅಧಿಕಾರಿಗಳು ಬಂದು ಪೋಟೋ ಹೊಡೆದುಕೊಂಡು ಹೋಗುವುದಕ್ಕೆ ಸಿಮೀತವಾಗಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ.
ಇದೀಗ ಸಂಭವೀಸಿರುವ ಕುಸಿತದಿಂದಾಗಿ ಗುಡ್ಡದ ಮೇಲಿರುವ ಶಾಲೆಯ ಕಂಪೌoಡ್ ಕುಸಿದಿದೆ. ಶಾಲೆ ಕುಸಿದು ಬೀಳುವ ಮೊದಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಮುಂದೆ ಆಗುವ ಅನಾಹುತ ತಪ್ಪಿಸಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.