ಹೊನ್ನಾವರ: ಹೊನ್ನಾವರ ತಾಲೂಕಿನ ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲಿನಲ್ಲಿರುವ ತನ್ನ ತವರು ಮನೆಗೆ ಬಂದು ಕಾಣೆಯಾಗಿದ್ದ ಮಹಿಳೆಯನ್ನು ಮಾಯಾನಗರಿ ಮುಂಬೈನಲ್ಲಿ ಪೊಲೀಸರು ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದಾರೆ.

ತನ್ನ ತಾಯಿಯ ಮನೆಗೆ ಬಂದವಳು ಮಗುವಿನ ಜೊತೆಗೆ ಕಾಣೆಯಾಗಿರುವ ಬಗ್ಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಪ್ರಕರಣ ದಾಖಲಾಗಿತ್ತು. ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳು ಎರಡು ವರ್ಷದ ಮಗುವಿನೊಂದಿಗೆ ಹೊರಗೆ ಹೋಗಿದ್ದು, ದಿಢೀರ್ ಆಗಿ ನಾಪತ್ತೆಯಾಗಿದ್ದಳು ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು.

RELATED ARTICLES  ಗೋಕರ್ಣದಲ್ಲಿ ಶಿವರಾತ್ರಿ ಪೂಜೆ

ಮಗಳು ಮರಳಿ ಮನೆಗೆ ಮನೆಗೆ ಬಂದಿಲ್ಲದ ಹಿನ್ನಲೆಯಲ್ಲಿ ಮಹಿಳೆ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮುಂಬೈನಲ್ಲಿ ಮಹಿಳೆಯನ್ನು ಪತ್ತೆಹಚ್ಚಿದ್ದು, ವಾಪಸ್ಸು ಮನೆಗೆ ಕರೆ ತಂದಿದ್ದಾರೆ.

ಮಹಿಳೆ ನಾಪತ್ತೆಯಾದ ಪ್ರಕರಣದ ಬೆನ್ನು ಹೊತ್ತಿದ್ದ ಪೊಲೀಸರು ತನಿಖೆಯಲ್ಲಿ ಆಕೆ ಮುಂಬೈನಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡಿದ್ದರು, ಮನೆಯ ಸದಸ್ಯರನ್ನು ಕರೆದುಕೊಂಡು ಹೋಗಿದ್ದ ಪೊಲೀಸರು ಮಹಿಳೆ ಹಾಗೂ ಮಗುವನ್ನು ಪತ್ತೆ ಮಾಡಿ ಬುದ್ಧಿ ಹೇಳಿ ವಾಪಸ್ಸು ಮನೆಗೆ ಕರೆದುಕೊಂಡು ಬಂದಿದ್ದಾರೆ.

RELATED ARTICLES  ಕೊಂಕಣ ಎಜ್ಯುಕೇಶನ್ ನಲ್ಲಿ ಮಾತೃಮಂಡಳಿ ಉದ್ಘಾಟನೆ

ಸಾಮಾಜಿಕ ಜಾಲತಾಣದ ಮೂಲಕ ಯುವಕನೊಬ್ಬನ ಪರಿಚಯವಾಗಿತ್ತು. ದಿನಕಳೆದಂತೆ ಇಬ್ಬರೂ ಆಪ್ತರಾಗಿದ್ದರು. ಹೀಗಾಗಿ ಮಗುವಿನೊಂದಿಗೆ ರೈಲು ಮೂಲಕ ಮುಂಬೈ ತೆರಳಿದ್ದಳು ಎಂದು ವರದಿಯಾಗಿದೆ. ತನಿಖೆ ವೇಳೆ ವಿಷಯ ಅರಿತ ಪೊಲೀಸರು, ಮಹಿಳೆಗೆ ಬುದ್ಧಿವಾದ ಹೇಳಿ, ಮರಳಿ ಮನೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.