ಹೊನ್ನಾವರ: ಉತ್ತರಕನ್ನಡದಲ್ಲಿ ಮತ್ತೆ ಗೋ ಕಳ್ಳಸಾಗಾಣಿಕೆ ಜಾಲ ಹೊರಬರುತ್ತಿದೆ. ಅಕ್ರಮ ಗೋ ಸಾಗಾಟ ಹಾಗೂ ಗೋ ಮಾಂಸ ಸಾಗಾಟ ಜಾಲಗಳು ಪೊಲೀಸ್ ಬಲೆಗೆ ಬೀಳುತ್ತಿದೆ.

ಸಿದ್ದಾಪುರದಿಂದ ಹೊನ್ನಾವರದ ಮಹಿಮೆಗೆ ಅಕ್ರಮ ಗೋ ಸಾಗಾಟ ಮಾಡುತ್ತಿರುವ ವೇಳೆ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಕಾರ್ಯಕರ್ತರು ಹಾಗೂ ಸ್ಥಳೀಯ ಎಲ್ಲ ಗೋ ಪ್ರೇಮಿಗಳು ಸೇರಿ ವಾಹನವನ್ನು ತಡೆ ಹಿಡಿದು, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

RELATED ARTICLES  ಕುಮಟಾದಲ್ಲಿ ಗಾಂಜಾ ವಾಸನೆ

ಯಾವುದೇ ರೀತಿಯ ದಾಖಲಾತಿ ಪತ್ರ ಇಲ್ಲದೆ ಇರುವುದರಿಂದ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವ ವಾಹನವನ್ನು ಈ ವೇಳೆ ಪೊಲೀಸ್ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಸಂಬoಧ ಮೂವರನ್ನು ಬಂಧಿಸಿದ್ದು, ಓರ್ವ ತಪ್ಪಿಸಿಕೊಂಡಿದ್ದಾನೆ. ಘಟನೆ ವೇಳೆ ಬೊಲೆರೊ ವಾಹನ ಮತ್ತು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರು ಎತ್ತುಗಳನ್ನು ರಕ್ಷಿಸಲಾಗಿದೆ.

RELATED ARTICLES  ಭಟ್ಕಳದ ಸರ್ಪನಕಟ್ಟೆಯಲ್ಲಿ ಪಾಳು ಬಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳ ವಸತಿ ಗೃಹದ ಬಗ್ಗೆ ಇಲಾಖೆಗಿಲ್ಲವೇ ಗಮನ?

ಅಕ್ರಮ ಗೋಸಾಗಾಟ ಹಾಗೂ ಜಾನುವಾರುಗಳ ಸಾಗಾಟದ ಕುರಿತಾಗಿ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದು ಈ ರೀತಿಯ ಪ್ರಕರಣಗಳು ಕಂಡುಬಂದಲ್ಲಿ ಸಮರ್ಥವಾಗಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ.