ದಕ್ಷಿಣ ಕನ್ನಡ (ಪುತ್ತೂರು) : ಪೊಲೀಸರಂದ್ರೆ ಸಾಕು ಕಾಸು ಪೀಕುತ್ತಾರೆ, ನ್ಯಾಯದ ಹೆಸರಿನಲ್ಲಿ ಅನ್ಯಾಯ ಎಸಗುತ್ತಾರೆ ಅನ್ನುವ ದೂರುಗಳೇ ಹೆಚ್ಚಾಗಿ ಕೇಳಿ ಬರುತ್ತದೆ. ಇದಕ್ಕೆ ಅಪವಾದ ಅನ್ನುವಂತೆ ಪುತ್ತೂರು ಪೊಲೀಸರು ನಡೆದು ತೋರಿಸಿದ್ದಾರೆ.

ಪುತ್ತೂರ ಮುತ್ತು ಮಹಾಲಿಂಗೇಶ್ವರನ ಊರಿನ ನಗರ ಠಾಣೆ ಪೊಲೀಸರ ಕಾರ್ಯ ಇದೀಗ ದೇವರ ಮೆಚ್ಚುಗೆಗೆ ಮಾತ್ರವಲ್ಲ ಜನ ಮೆಚ್ಚುಗೆಗೂ ಪಾತ್ರವಾಗಿದೆ.

ಅದು ಸಪ್ಟಂಬರ್ ತಿಂಗಳ ಮೂರನೇ ತಾರೀಖು, ರಾತ್ರಿ 10 ಗಂಟೆಯ ಸಮಯ. ಕೆಎಸ್ಆರ್ಟಿಸಿ ಸಿಬ್ಬಂದಿಗಳ ಕುಟುಂಬಗಳೆರಡು ಪುತ್ತೂರು ಬಸ್ ನಿಲ್ದಾಣದಲ್ಲಿ ಸುಳ್ಯಕ್ಕೆ ತೆರಳಲು ಬಸ್ ಗಾಗಿ ಕಾಯುತ್ತಿತ್ತು. ವಯೋ ವೃದ್ಧರು ಕೂಡಾ ಕುಟುಂಬದಲ್ಲಿದ್ದರು.

RELATED ARTICLES  ರಂಗಸ್ಥಳದಲ್ಲಿಯೇ ಹೃದಯಾಘಾತವಾಗಿ ಖ್ಯಾತ ಕಲಾವಿದ ಸಾವು.

ಭಾನುವಾರದ ಕಾರಣ ಬಸ್ ಗಳ ಸಂಖ್ಯೆ ಕಡಿಮೆ ಇತ್ತು. ಮೈಸೂರು ಮಾರ್ಗವಾಗಿ ಬೆಂಗಳೂರು ಹೋಗುವ ರಾಜಹಂಸ ಬಸ್ ಸೇರಿದಂತೆ ಅನೇಕ ಬಸ್ ಗಳಿಗೆ ಕೈ ಹಿಡಿದ್ರೆ ಕರೆದೊಯ್ಯಲು ಸಿದ್ದರಿರಲಿಲ್ಲ. ಇನ್ನೇನು ತಮ್ಮ ಸಹೋದ್ಯೋಗಿಗಳೇ ತಮ್ಮ ಮೇಲೆ ಕರುಣೆ ತೋರುತ್ತಿಲ್ಲ ಅಂದ ಮೇಲೆ ಬಸ್ ನಿಲ್ದಾಣದಲ್ಲೇ ಮಲಗಬೇಕಾದ ಅನಿವಾರ್ಯತೆ ಎದುರಾಗಿತ್ತು.

ಇದೇ ವೇಳೆ ರಾತ್ರಿ ಗಸ್ತಿನಲ್ಲಿ ಬಂದ ಪುತ್ತೂರು ನಗರ ಠಾಣೆಯ ಪೊಲೀಸರು ಈ ಕುಟುಂಬ ಬಸ್ ಹತ್ತಲು ಪರದಾಡುತ್ತಿರುವುದನ್ನು ಗಮನಿಸಿದ್ದಾರೆ, ಹೋಗಿ ವಿಚಾರಿಸಿದ್ರೆ ಬಸ್ ಸಂಕಷ್ಟದ ಅರಿವಾಯ್ತು. ಪೊಲೀಸ್ ಸಿಬ್ಬಂದಿ ಹೇಳಿದ್ರು KSRTC ಸಿಬ್ಬಂದಿ ಸುಳ್ಯಕ್ಕೆ ಇವರನ್ನು ಬಿಡಲು ಸಿದ್ದವಿರಲಿಲ್ಲ. ಚೆಕ್ಕಿಂಗ್ ನವರು ಬಂದ್ರೆ ಮಾನವೀಯತೆ ನೋಡುವುದಿಲ್ಲ, ಕೇಸ್ ಜಡಿಯುತ್ತಾರೆ, ನಮಗ್ಯಾಕೆ ತಲೆನೋವು ಎಂದು ಜಾರಿಕೊಂಡ್ರು.

RELATED ARTICLES  ಶಿಕ್ಷಕರ ನೇಮಕಾತಿ ಎಂಬ ಹೈ ಡ್ರಾಮಾ?.

ಕೊನೆಗೆ ಕುಟುಂಬದ ಸಂಕಷ್ಟಕ್ಕೆ ಮಿಡಿದ ಪೊಲೀಸರು ತಮ್ಮದೇ ಜೀಪ್ ನಲ್ಲಿ ಬೈಪಾಸ್ ರಸ್ತೆಗೆ ಕರೆದುಕೊಂಡು ಹೋಗಿ ಖಾಸಗಿ ಬಸ್ ನಿಲ್ಲಿಸಿ,ಸಿಬ್ಬಂದಿಗಳಲ್ಲಿ ವಿನಂತಿಸಿ ಸುಳ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಅಂದ ಹಾಗೇ ಸಾರ್ವಜನಿಕರ ಸಹಾಯ ಮಾಡಿದ ತಂಡದಲ್ಲಿ ಪಿಎಸ್ಐ ಒಮನಾ, ಮಹಿಳಾ ಪಿಸಿ ಪದ್ಮಾವತಿ, ಪಿಸಿ ಸ್ಕರಿಯಾ ಹಾಗೂ ಹೋಮ್ ಗಾರ್ಡ್ ಭಾಸ್ಕರ್ ಅವರಿದ್ದರು.

ಪೊಲೀಸರ ಈ ಕೆಲಸ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ