ಕಾರವಾರ : ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಔಷಧ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದುದನ್ನು ಗಮನಿಸಿ ಸ್ಪಿರಿಟ್ ಜೊತೆಗೆ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಬರೊಬ್ಬರಿ 2.53 ಲಕ್ಷ ಮೌಲ್ಯದ ಸ್ಪಿರಿಟ್ ವಶಪಡಿಸುಕೊಳ್ಳಲಾಗಿದ್ದು, ಗೋವಾದ ಪೋಂಡಾದಿಂದ ಮುಂಜಾನೆ ಕೇರಳದ ಕೊಚ್ಚಿಗೆ ಹೊರಟಿದ್ದ ಲಾರಿಯನ್ನು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ಗೋವಾ ಕರ್ನಾಟಕ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ತಡೆದಿದ್ದರು.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಜೊತೆ ಪ್ರಚಾರ ನಡೆಸುತ್ತಿದ್ದಾರೆ ಸುಬ್ರಾಯ್ ವಾಳ್ಕೆ.

ಔಷಧಿ ಎಂದು ಹೇಳಲಾಗುತ್ತಿದ್ದ ಬಾಕ್ಸ್ ಒಂದನ್ನು ಒಪನ್ ಮಾಡಿದಾಗ ಸ್ಪಿರಿಟ್ ಇರುವುದು ಪತ್ತೆಯಾಗಿದೆ. ತಕ್ಷಣ ಲಾರಿಯಲ್ಲಿ 35 ಲೀಟರ್‌ನ ಒಟ್ಟು 125 ಕ್ಯಾನ್‌ಗಳಲ್ಲಿ ತುಂಬಿಸಿದ್ದ 4,375 ಲೀಟರ್ ಸ್ಪಿರಿಟ್ ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಲಾರಿ ಚಾಲಕ ಜಿಷ್ಣು ಕೆ ಎಂಬುವವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

RELATED ARTICLES  ಐಸಿಎಸ್‍ಸಿ 10ನೇ ತರಗತಿ ಫಲಿತಾಂಶ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಇದಲ್ಲದೆ ಸ್ಪಿರಿಟ್ ಸಾಗಾಟಕ್ಕೆ ಬಳಸಿದ್ದ 20.80 ಲಕ್ಷದ ಲಾರಿ, ಲಾರಿಯಲ್ಲಿದ್ದ 7.14 ಲಕ್ಷ ಮೌಲ್ಯದ 1 ಸಾವಿರ ಬಾಕ್ಸ್ ಔಷಧ ಹಾಗೂ 2,53,750 ರೂಪಾಯಿ ಮೌಲ್ಯದ ಸ್ಪಿರಿಟ್ ಸೇರಿ ಒಟ್ಟು 30,47,750 ರೂಪಾಯಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.