ಭಟ್ಕಳ: ಎಡಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರಕನ್ನಡದ ಹಲವು ಭಾಗಗಳು ತತ್ತರಿಸಿದೆ. ತಾಲೂಕಿನಲ್ಲಿ ಶನಿವಾರ ತಡ ರಾತ್ರಿಯಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಲವೆಡೆ ರಸ್ತೆಗಳು ನೀರಿನಿಂದ ಜಲಾವೃತಗೊಂಡಿದೆ.
ಭಟ್ಕಳ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯದ ಎದುರಿನ ರಾಷ್ಟ್ರಿಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಒಂದು ಭಾಗ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡಿದೆ.
ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿರುವ ಸ್ಥಳೀಯರು. ಸ್ಥಳೀಯರು ನೀರಿನಲ್ಲಿ ಗಾಳ ಹಾಕಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದ ಎದುರಿನ ರಾಷ್ಟ್ರಿಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿವರ್ಷ ಈ ಭಾಗದಲ್ಲಿ ಸಣ್ಣ ಮಳೆ ಬಂದರು ನೀರು ನಿಲ್ಲುತ್ತಿದ್ದು. ಇಂದಿನ ಬಾರಿ ಮಳೆಯಿಂದ ರಸ್ತೆ ಜಲಾವೃತಗೊಂಡ ಪರಿಣಾಮ ಈ ಭಾಗದ ಸ್ಥಳೀಯರು ರಸ್ತೆಗೆ ಗಾಳ ಹಾಕಿ ಮೀನು ಹಿಡಿಯುವಂತೆ ಪ್ರತಿಭಟನೆ ಮಾಡಿದ್ದಾರೆ.