ಯಲ್ಲಾಪುರ: ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಹಲದೇವರ ಜಡ್ಡಿಯಲ್ಲಿ ಸಾಲಬಾಧೆ ಮತ್ತು ಅನಾರೋಗ್ಯದಿಂದ ಮನನೊಂದ ರೈತನೊಬ್ಬ ಮನೆ ಪಕ್ಕದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ನಡೆದಿದೆ.

ಈತ ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಣೇಶ್ ಕುಣಬಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.

RELATED ARTICLES  ಚಿತ್ತಾಕುಲ ದೇವಭಾಗ ಸರ್ಕಾರಿ ಪ್ರಾಥಮಿಕ ಶಾಲೆಗೆ ನವೀಕರಣ ಭಾಗ್ಯ

ಈತ ಸಾಲವನ್ನು ಮಾಡಿಕೊಂಡಿದ್ದನಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ, ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

RELATED ARTICLES  ಕುಮಟಾ : ಅಳ್ವೇಕೋಡಿಯಲ್ಲಿ ಬೆಂಕಿ ಅವಘಡ : 6 ತಾಸು ಕಾರ್ಯಾಚರಣೆ ಮಾಡಿದರೂ ನಂದದ ಬೆಂಕಿ.

ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹಾಗೂ ಮುಂದಿನ ಪ್ರಕ್ರಿಯೆ ಕೈಗೊಂಡಿರುವ ಬಗ್ಗೆ ಸ್ಥಳೀಯವಾಗಿ ವರದಿಯಾಗಿದೆ.