ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ನಿರೂಪಣೆ ಸಮರ್ಪಕವಾಗಿರಬೇಕು. ನಿರೂಪಣೆಗೆ ಕಾರ್ಯಕ್ರಮವನ್ನು ಆಕರ್ಷಣೀಯವನ್ನಾಗಿಸುವ ಶಕ್ತಿ ಇದೆ. ಆದರೆ ಇದು ನಿರೂಪಕನ ಸಾಮರ್ಥ್ಯದ ಮೇಲೆ ನಿಂತಿದೆ. ಸತತ ಅಧ್ಯಯನ , ಮನನ, ಸಮಯ ಪ್ರಜ್ಞೆ ಇವು ನಿರೂಪಕನ ಯಶಸ್ಸಿನ ಗುಟ್ಟು” ಎಂದು ರವೀಂದ್ರ ಭಟ್ಟ ಸೂರಿ ಹೇಳಿದರು. ಅವರು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ಇವರು ಸಂಘಟಿಸಿದ್ದ ” ನಿರೂಪಣೆ ಹೀಗಿರಲಿ” ಆನ್ ಲೈನ್ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಿರೂಪಣೆಯ ಅರ್ಥವ್ಯಾಪ್ತಿ, ನಿರೂಪಣೆಯಲ್ಲಿ ಗೊಂದಲದ ಸಂದರ್ಭಗಳು ಹಾಗೂ ಪರಿಹಾರ, ನಿರೂಪಕ ಹಾಗೂ ಸಂಘಟಕರ ಜವಾಬ್ದಾರಿ ಮುಂತಾದ ಮಾಹಿತಿಗಳನ್ನು ಅವರು ಒದಗಿಸಿದರು.

RELATED ARTICLES  ಮಹದಾಯಿ ಯೋಜನೆ ಮಾತುಕತೆಗೆ ಗೋವಾ ಸದಾ ಸಿದ್ಧ;ಮನೋಹರ ಪರಿಕ್ಕರ್

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಾಜ್ಯಧ್ಯಕ್ಷರಾದ ಪಿ.ಮಹೇಶ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ” ಕಾರ್ಯಕ್ರಮದ ಯಶಸ್ಸು ನಿರೂಪಣೆಯನ್ನು ಅವಲಂಬಿಸಿದೆ. ಅದು ಕಾರ್ಯಕ್ರಮದ ಬೆನ್ನೆಲುಬು. ಇದನ್ನು ಅರಿತ ನಮ್ಮ ಪರಿಷತ್ತು ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಿಕ್ಷಕರಿಗೂ ಈ ರೀತಿಯ ತರಬೇತಿಗಳು ಸಿಗುವಂತೆ ಮಾಡಲಾಗುವುದು ಎಂದರು. ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶಂಕರ ಕ್ಯಾಸ್ತಿಯವರು ಆಶಯ ನುಡಿಗಳನ್ನಾಡಿ” ಪರಿಷತ್ತು ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಕರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ. ಶಿಕ್ಷಕರು ಇದರ ಪ್ರಯೋಜನ ಪಡೆದು ಯಶಸ್ಸು ಗಳಿಸುವಂತಾಗಲಿ” ಎಂದು ಹಾರೈಸಿದರು.

RELATED ARTICLES  ಖಾಸಗಿ ಬಸ್‌ನಲ್ಲಿ ₹2.98 ಕೋಟಿ ಹಣ ಪತ್ತೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಚೌಹಾಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯ ಕೋಶಾಧ್ಯಕ್ಷರಾದ ಚಲುವೇಗೌಡರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಜ್ಯ ನಿರ್ಧೇಶಕರಾದ ಎನ್.ಎಸ್.ಮುಶೆಪ್ಪನವರ್ ಸ್ವಾಗತಿಸಿದರು. ರಾಜ್ಯ ಸಹಕಾರ್ಯದರ್ಶಿ ಸತೀಶ ಕಿವಡಿ ನಿರೂಪಿಸಿದರು. ರಾಜ್ಯ ನಿರ್ಧೇಶಕರಾದ ನಾಗರಾಜ ಹುಡೇದ ವಂದನಾರ್ಪಣೆಗೈದರು. ಸಹಕಾರ ಸಮಿತಿಯ ನಾಗಭೂಷಣರವರು ತಾಂತ್ರಿಕ ನಿರ್ವಹಣೆ ಮಾಡಿದರು. ಪ್ರತಿಭಾ ಪರಿಷತ್ತಿನ ರಾಜ್ಯ ಪದಾಧಿಕಾರಿಗಳು, ಹಾಗೂ ಸಹಕಾರ ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರು ಭಾಗವಹಿಸಿದ್ದರು.