ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿಯವರ ಆತ್ಮಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ, ಇವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಖಾಸಗೀ ವಾಹಿನಿಯಲ್ಲಿ ಸಂಧರ್ಶನದ ವೇಳೆ ಅಂದಿನ ಗೃಹಮಂತ್ರಿ ಕೆಜೆ ಜಾರ್ಜ್ ಮತ್ತು ಹಿರಿಯ ಅಧಿಕಾರಿಯಾಗಿದ್ದ ಮೊಹಂತಿ ಮತ್ತು ಎ.ಎಂ ಪ್ರಸಾದ್ರವರ ಹೆಸರುಗಳನ್ನು ಹೇಳಿ ಮುಂದೆ ತನಗೇನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣ ಎಂದು ಹೇಳಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಆತ್ಮಹತ್ಯೆ ಮಾಡಿಕೊಂಡ ನಂತರ ರಾಜ್ಯಾಧ್ಯಂತ ಇದನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಹೋರಾಟಗಳು ನಡೆದರೂ ಕೂಡ ಇದನ್ನ ಸರ್ಕಾರ ಸಿಐಡಿಗೆ ವಹಿಸಿತು. ನಂತರ ಈ ಕೇಸ್ನಲ್ಲಿ ಕೆ.ಜೆ.ಜಾರ್ಜ್ ಮೊಹಂತಿ ಮತ್ತು ಎ.ಎಂ ಪ್ರಸಾದ್ ರವರಿಗೆ ಕ್ಲೀನ್ಚಿಟ್ ಸಿಕ್ಕಿತ್ತು ಇದರಿಂದ ಬೇಸರಗೊಂಡಿದ್ದ ಎಂಕೆ ಗಣಪತಿ ಮನೆಯವರು ಸುಪ್ರೀಂ ಮೊರೆ ಹೋಗಿದ್ದರು. ಕ್ಲೀನ್ಚಿಟ್ ದೊರೆತ ನಂತರ ಆ ಕೇಸ್ಗೆ ಸಂಬಂಧಿಸಿದ ಎಲ್ಲಾ ಧಾಖಲೆಗಳು ನಾಶವಾಗಿವೆ ಎಂದು ವರದಿಯಾಗಿತ್ತು.