ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ದೈವೈಕ್ಯರಾಗಿದ್ದಾರೆ.ಗೋವಾದಲ್ಲಿರಯವ ಶ್ರೀ ಮಠದಲ್ಲಿ  ಅವರು ಹರಿಪಾದ ಸೇರಿದ ಬಗ್ಗೆ ಸ್ಥಳೀಯ ವರದಿಗಳು ತಿಳಿಸಿದೆ. ಗಣ್ಯಾತಿ ಗಣ್ಯರು ಶ್ರೀಗಳ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಗೋಕರ್ಣ ಪರ್ತಗಾಳಿ ಮಠದ ಶ್ರೀವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸೋಮವಾರ ಹರಿಪಾದ ಸೇರಿದರು. ಸೋಮವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದ ಬಗ್ಗೆ ವರದಿಯಾಗಿದೆ.

ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸೇನಾಪುರ ಆಚಾರ್ಯ ಮನೆತನದವರಾದ ಅವರು ಗಂಗೊಳ್ಳಿಯ ಶ್ರೀ ವೇಂಕಟರಮಣ ದೇವಾಲಯದ ಅರ್ಚಕ ಮನೆತನದವರು. ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಮತ್ತ ಶ್ರೀಮತಿ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು.

ಅವರ ಪೂರ್ವಾಶ್ರಮದ ಹೆಸರು ರಾಘವೇಂದ್ರ. ಗಂಗೊಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಪಡೆದು ಕುಂದಾಪುರದ ಭಂಡಾರಕರ ಕಾಲೇಜಿನಲ್ಲಿ ಓದುವಾಗ ಶ್ರೀ ದ್ವಾರಕಾನಾಥ ಶ್ರೀಗಳ ಶಿಷ್ಯತ್ವ ಹೊಂದುವ ಅವಕಾಶ ಬಂತು. ಗುರುವರ್ಯರ ಆದೇಶ ಕೇಳಿ ಖುಷಿಯಿಂದ ಸನ್ಯಾಸಾಶ್ರಮ ಸ್ವೀಕಾರಕ್ಕೆ ಒಪ್ಪಿದರು.

RELATED ARTICLES  ಕೊರೋನಾಕ್ಕೆ ತತ್ತರಿಸುತ್ತಿದೆ ಉತ್ತರಕನ್ನಡ : ಒಂದೇ ದಿನ 15 ಸಾವು

ಮುಂಬಯಿ ವಡಾಲಾದ ದ್ವಾರಕಾನಾಥ ಭವನದಲ್ಲಿ ಅವರು ಶ್ರೀ ದ್ವಾರಕಾನಾಥ ಸ್ವಾಮಿಗಳಿಂದ ೯-೨-೧೯೬೭ರಲ್ಲಿ ಸನ್ಯಾಸ ದೀಕ್ಷೆ ಪಡೆದು ಶ್ರೀ ಮದ್ ವಿದ್ಯಾಧಿರಾಜ ತೀರ್ಥ ಸ್ವಾಮಿಗಳಾಗಿ ನಾಮಕರಣಗೊಂಡರು. ಸುಮಾರು ಐದು ದಶಕಗಳ ಸನ್ಯಾಸಾಶ್ರಮದಲ್ಲಿದ್ದ ಅವರು ಶ್ರೀಗಳು ೧೯೭೧ರಲ್ಲಿ ಗೋಕರ್ಣ ಪರ್ಥಗಾಳಿ ಮಠದ ಪೀಠಾಧಿಪತಿಗಳಾಗಿದ್ದರು.

ಮೂಲತಃ ಉಡಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ಶ್ರೀಗಳು ಇದೇ ಜುಲೈ ೨೮ ರಂದು ಪರ್ತಗಾಳಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುವವರಿದ್ದರು. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳ ಅಭಿವೃದ್ಧಿ ಮಾಡಿದ್ದರು. ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

RELATED ARTICLES  ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ

Screenshot 20210719 151955 Facebook
ಶಿವರಾಮ ಹೆಬ್ಬಾರ್ ಸಂತಾಪ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ನಮ್ಮನ್ನು ಅಗಲಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.

ಸಮಾಜದ ಒಳಿತಿಗಾಗಿ,ಸನಾತನ ಹಿಂದು ಧರ್ಮದ ರಕ್ಷಣೆ ಹಾಗೂ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತೆಗಾಗಿ ಹಲವಾರು ದಶಕಗಳ ಕಾಲ ಶ್ರಮಿಸಿದ ಪೂಜ್ಯರು ಜಾತಿ, ಧರ್ಮ, ಮತ ಭೇದ ಮಾಡದೇ ನೊಂದು ಬಂದ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸುತ್ತಿದ್ದರು ಶ್ರೀಗಳ ಅಗಲಿಕೆಯಿಂದಾಗಿ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ.

ಭಗವಂತ ಪರಮ ಪೂಜ್ಯರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾಥಿಸುತ್ತೆನೆ, ದುಃಖದಲ್ಲಿರುವ ಲಕ್ಷಾಂತರ ಭಕ್ತರ ಸಮೂಹದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಂತಾಪ ಸೂಚಿಸಿದ್ದಾರೆ.

 

ಸುನೀಲ್ ನಾಯ್ಕ ಸಂತಾಪ

IMG 20210719 WA0002