ಕುಮಟಾ :  ತಾಲೂಕಿನ ಕು. ನಂದಿತಾ ಭಟ್ಟ ಶೃಂಗೇರಿಯ “ಪ್ರಜ್ಞಾನಮ್” ಸಂಸ್ಥೆಯವರು ನಡೆಸಿದ ಭಗವತ್ ಸ್ತೋತ್ರ ಕಂಠಪಾಠ ಪರೀಕ್ಷೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮವೇ ಮುಂತಾದ ೧೪ ಭಗವತ್ ಸ್ತೋತ್ರಗಳನ್ನು ಕಂಠಸ್ಥಗೊಳಿಸಿ ಪ್ರಸ್ತುತ ಪಡಿಸಿ ೧೦೦೦೦-೦೦₹ಗಳ ಪಾರಿತೋಷಕದೊಂದಿಗೆ ಗೌರವಿಸಲ್ಪಟ್ಟಿದ್ದಾಳೆ.

RELATED ARTICLES  ಕಳ್ಳಬಟ್ಟಿ ಪ್ರಕರಣ ಭೇದಿಸಿದ ಕುಮಟಾ ಪೊಲೀಸರು

  ಕುಮಟಾ ಉಂಚಗಿಯ ಶ್ರೀಮತಿ ಶ್ರೀದೇವಿ ಮತ್ತು ಶ್ರೀ ಸುರೇಶ ಭಟ್ಟ ದಂಪತಿಗಳ ಪುತ್ರಿಯಾಗಿರುವ ಈಕೆ ಪ್ರಾರಂಭದಿಂದಲೂ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ಸಾಧನೆ ತೋರಿದವಳಾಗಿದ್ದಾಳೆ.

ಈಕೆ ಕುಮಟಾದ ಬಗ್ಗೋಣದ ಸಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು ಸಂಗೀತಾಭ್ಯಾಸವನ್ನು ನಿರಂತರವಾಗಿ ನಡೆಸುತ್ತಿರುವುದು ವಿಶೇಷ. ಈಕೆ ಕುಮಟಾದ ಗಿಬ್ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲಿನಲ್ಲಿ  ೧೦ನೇ  ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

RELATED ARTICLES  ಕಛೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸಟೇಬಲ್.

ಈಕೆಯ ಸಾಧನೆಗೆ ಈಕೆಯ ಕುಟುಂಬದ ಸದಸ್ಯರು, ಶಿಕ್ಷಕ ವೃಂದದವರು ಹಾಗೂ ಊರಿನ ನಾಗರೀಕರು ಸಂತಸ ವ್ಯಕ್ತಪಡಿಸಿದ್ದು, ಸಾಧನೆ ನಿರಂತರವಾಗಲೆಂದು ಶುಭ ಹಾರೈಸಿದ್ದಾರೆ.