ಕಾರವಾರದ ನೌಕಾನೆಲೆ ಹಾಗೂ ಶಸ್ತ್ರಾಗಾರ ವಲಯದ ಮೇಲೆ ದ್ರೋಣ್ ಹಾರಾಟ ನಿರ್ಬಂಧಿಸಿ ರಕ್ಷಣಾ ಸಚಿವಾಲಯ ಸೂಚನೆ ಹೊರಡಿಸಿದೆ.
ಕಾರವಾರದ ವಜ್ರ ಕೋಶವನ್ನು ನೋ ಪ್ಲೈಯಿಂಗ್ ಝೋನ್ ಎಂದು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಶನ್ ಆದೇಶ ಹೊರಡಿಸಿದೆ. ಅಂದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆ ಹಾಗೂ ಶಸ್ತ್ರಾಗಾರ ವಲಯ ವಜ್ರ ಕೋಶ ಮೇಲೆ ಡ್ರೋನ್ ಹಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕಾರವಾರ ನೌಕಾ ನೆಲೆಯ 3 ಕಿ.ಮೀ .ವ್ಯಾಪ್ತಿಯಲ್ಲಿ ಹಾಗೂ ವಜ್ರಕೋಶದ ಪ್ರದೇಶದ ಮೇಲೆ ಡ್ರೋನ್ ಹಾರಾಟ ಹಾಗೂ ಮಾನವ ರಹಿತ ವಿಮಾನ ಹಾರಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ.
ಹಾಗೇನದರೂ ಖಾಸಗಿಯವರು ಅಥವಾ ಯಾರೇ ಆಗಲಿ ಡ್ರೋನ್ ಹಾರಾಟ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೂ ಕಾನೂನು ಬಾಹಿರ ಹಾರಾಟವನ್ನು ನೇವಿ ಹೊಡೆದುರುಳಿಸಬಹುದಾಗಿದೆ.
ಈ ಸೂಚನೆ ನೌಕಾನೆಲೆಯ ಖಾಸಗಿತನ ಕಾಪಾಡಿಕೊಳ್ಳುವಿಕೆ ಹಾಗೂ ರಕ್ಷಣಾ ದೃಷ್ಟಿಯಿಂದ ಅತ್ಯುತ್ತಮ ಆದೇಶ ಎಂದೇ ಬಣ್ಣಿಸಲಾಗಿದೆ.