ಕಾರವಾರ: ಗೋ ಹತ್ಯೆ ನಿಷೇಧದ ಕೂಗು ಆಗಾಗೆ ಪ್ರತಿಧ್ವನಿಸುತ್ತಿದೆ. ಇದೀಗ ವಿಶೇಷ ರೀತಿಯಲ್ಲಿ ವ್ಯಕ್ತಿಯೊಬ್ಬನು ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.
ತಾಲೂಕಿನ ನಂದನಗದ್ದಾ ನಿವಾಸಿ ರೋಶನ್ ರಾಜೇಂದ್ರ ಶೇಟಿಯಾ ಎಂಬ ಯುವಕನೋರ್ವ ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸುವಂತೆ ಹಾಗೂ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ತನ್ನ ರಕ್ತದಿಂದ ಬರೆದ ಪತ್ರವನ್ನು ಪ್ರಧಾನಿ ಮೋದಿಗೆ ಕಳುಹಿಸಿದ್ದಾನೆ.
ಈ ರೋಶನ್ ಎಂಬ ಯುವಕ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದು ಗಮನ ಸೆಳೆದಿದ್ದಾನ. ಜುಲೈ 19 ರಂದು ನಂದನಗದ್ದಾ ಅಂಚೆ ಕಚೇರಿ ಮೂಲಕ ಗಣ್ಯರಿಗೆ ರವಾನಿಸಿದ್ದಾರೆ. ಅಲ್ಲದೆ, ಸರ್ವೋಚ್ಚ ನ್ಯಾಯಾಲಯದ ಹಾಗು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಕಳುಹಿಸಿದ್ದಾರೆ. ಗೋಹತ್ಯೆ ನೋಡಿ ಬೇಸರಗೊಂಡಿದ್ದು, ಇದಕ್ಕಾಗಿ ರಕ್ತದಲ್ಲಿ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದೇನೆ ಎಂದಿದ್ದಾರೆ.