ಕುಮಟಾ : ಕತಗಾಲ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಅಂಬುಲೆನ್ಸ್ ಅನ್ನು ಶಾಸಕ ದಿನಕರ ಶೆಟ್ಟಿ ಇಂದು ಹಸ್ತಾಂತರಿಸಿದರು. ಗುಡ್ಡಗಾಡು ಪ್ರದೇಶ ಹಾಗೂ ಪಟ್ಟಣದಿಂದ ದೂರ ಇರುವ ಈ ಪ್ರದೇಶದ ಜನರಿಗೆ ಅನಾರೋಗ್ಯದ ತುರ್ತು ಸಂದರ್ಭಗಳಲ್ಲಿ ಉಪಯೋಗವಾಗುವಂತೆ ಅಂಬುಲೆನ್ಸ್ ಅನ್ನು ನೀಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ  ಶ್ರೀ ಶಿವರಾಮ ಹೆಬ್ಬಾರ ಅವರ ಸಹಕಾರದಿಂದ ಕುಮಟಾ ತಾಲೂಕಿನ ಗುಡ್ಡ-ಕಾಡು ಪ್ರದೇಶ ಕತಗಾಲ ಭಾಗಕ್ಕೆ ಆಂಬುಲೆನ್ಸ್ ಹಸ್ತಾಂತರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಿರಿ ಎಂದು ಶಾಸಕರಾದ ದಿನಕರ ಶೆಟ್ಟಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES  ಇಳೆಗೆ ಇಳಿಯಿತು ಮಳೆ: ಅನ್ನದಾತನ ನಿಷ್ಟೆಯ ಕಾಯಕ ಚುರುಕು, ಹಸನುಗೊಳ್ಳುತ್ತಿದೆ ಕೃಷಿ ಭೂಮಿ.

ಈ ಸಂದರ್ಭದಲ್ಲಿ ಬಿಜೆಪಿ ಕುಮಟಾ ಮಂಡಲದ ಅಧ್ಯಕ್ಷರಾದ ಶ್ರೀ ಹೇಮಂತ್ ಗಾಂವ್ಕರ್,ತಾಲೂಕ ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ , ಮಾಜಿ ಜಿ ಪಂ ಸದಸ್ಯರಾದ ಶ್ರೀ ಗಜಾನನ ಪೈ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರಪ್ರಭ ನಾಯಕ್ ,ಅಲ್ಕೋಡ ಗ್ರಾಂ ಪಂ ಅಧ್ಯಕ್ಷರಾದ ಶ್ರೀಮತಿ  ಕೇಸರಿ ಜೈನ,ಉಪಾಧ್ಯಕ್ಷರಾದ ಶ್ರೀ ಶ್ರೀಧರ್ ಪೈ, ಶ್ರೀ ವಿಶ್ವನಾಥ್ ನಾಯ್ಕ ಮತ್ತಿತರರು ಉಸ್ಥಿತರಿದ್ದರು.

RELATED ARTICLES  ಮತ ಎಣಿಕೆಗೆ ಸಕಲ‌ ಸಿದ್ಧತೆ : ಕುಮಟಾದ ಬಾಳಿಗಾ ಕಾಲೇಜಿನಲ್ಲಿ ನಡೆಯಲಿದೆ ಪ್ರಕ್ರಿಯೆ.