ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನಾಳೆ ಲಭ್ಯವಿರುವ ಕೋವಿಡ್ ವ್ಯಾಕ್ಸಿನೇಷನ್‌ ವಿವರ ಇಲ್ಲಿದೆ. ಭಟ್ಕಳ 800, ಹಳಿಯಾಳ 300, ಹೊನ್ನಾವರ 800, ಜೋಯ್ಡಾ 300,ಅಂಕೋಲಾದಲ್ಲಿ 600, ಕಾರವಾರ 800, ಮುಂಡಗೋಡ 600, ಕುಮಟಾ 800, ಸಿದ್ದಾಪುರ 600, ಯಲ್ಲಾಪುರ 600, ದಾಂಡೇಲಿ 300 ಡೋಸ್ ಲಸಿಕೆ ಇದೆ.

RELATED ARTICLES  ಮಿರ್ಜಾನ್ ರೈಲ್ವೆ ಗೇಟ್ ಸಮೀಪ ರೈಲು ಬಡಿದು ವ್ಯಕ್ತಿ ಸಾವು.

ಉತ್ತರಕನ್ನಡದಲ್ಲಿ ನಾಳೆ ಒಟ್ಟೂ 8400 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.

ಅಂಕೋಲಾದ ಹಳವಳ್ಳಿ (120), ಅಗಸೂರ (50), ಉಳುವರೆ (60), ಅಚವೆ (100), ಅಲಗೇರಿ (120), ಪ್ರಾ. ಆ. ಕೇಂದ್ರ ಹಟ್ಟಿಕೇರಿ (50), ತೆಂಕಣಕೇರಿ (100) ಸೇರಿ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟೂ 600 ಡೋಸ್ (2ನೇ ಹಂತದವರಿಗೆ ಮಾತ್ರ), ಲಸಿಕೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

RELATED ARTICLES  ಖ್ಯಾತ ಚಲನಚಿತ್ರ ನಟನಿಗೆ ಎರಡು ವರ್ಷದ ಜೈಲು ಶಿಕ್ಷೆ : ಕುಡಿದು ವಾಹನ ಚಲಾವಣೆ ಪ್ರಕರಣದಲ್ಲಿ ತೀರ್ಪು.

ಶಿರಸಿ ತಾಲೂಕಿನಲ್ಲಿ ಒಟ್ಟು 1000 ವ್ಯಾಕ್ಸಿನ್ ಲಭ್ಯವಿದೆ. 2ನೇ ಡೋಸ್ ನವರಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು ಬಿ.ಆರ್ ಅಂಬೇಡ್ಕರ್ ಭವನದಲ್ಲಿ 500, ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ 500 ವ್ಯಾಕ್ಸಿನ್ ಲಭ್ಯವಿದೆ.