ಯಲ್ಲಾಪುರ : ತಾಲೂಕಿನ ಶಿಕ್ಷಕರಾದ ಚಂದ್ರಶೇಖರ ತಂದೆ ನರಸಿಂಹ ಹೆಗಡೆ , ಶಾರದಾಗಲ್ಲಿ ಇವರು ನೀಡಿದ್ದ ದೂರಿನಂತೆ ದಿನಾಂಕ : 18-12-2020 ರಂದು ಸಂಜೆ 5-00 ಗಂಟೆಯಿಂದ ದಿನಾಂಕ 9-12-2020ರ ರಾತ್ರಿ 8-00 ಗಂಟೆಯ ನಡುವಿನ ಅವದಿಯಲ್ಲಿ ಯಲ್ಲಾಪುರ ಶಹರದ ಶಾರದಾಗಲ್ಲಿಯಲ್ಲಿರುವ ಚಂದ್ರಶೇಖರ್ ಅವರ ಮನೆಯ ಮುಂದಿನ ಬಾಗಿಲ ಬೀಗವನ್ನು ಯಾವುದೊ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಬೆಡ್‌ರೂಮ್‌ನಲ್ಲಿದ್ದ ಗೊದ್ರೆಜ್ ಕಪಾಟನ್ನು ಮೀಟಿ ತೆಗೆದು ಅದರಲ್ಲಿದ್ದ ಬೆಳ್ಳಿ ಬಂಗಾರದ ಆಭರಣ ಕಳ್ಳತನವಾಗಿರುವ ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು.
ಈ ಪ್ರಕರಣವನ್ನು ಭೇದಿಸಿ ಪ್ರಕರಣದ ಪ್ರಮುಖ ಆರೋಪಿತನಾದ ಅಶೋಕ ತಂದೆ ಹನಮಂತಪ್ಪ ಬಂಡಿವಡ್ಡರ ಶಿರವಾಡ , ಕಾರವಾರ ಈತನನ್ನು ದಸ್ತಗಿರಿ ಮಾಡಿದ್ದು ಇತನಿಂದ ಕಳ್ಳತನ ಮಾಡಿದ ಸುಮಾರು 55 ಗ್ರಾಂ ತೂಕದ ಬಂಗಾರದ ಆಭರಣಗಳಾದ 2 ಬಂಗಾರದ ಚೈನ , 1 ಬಂಗಾರದ ಬ್ರೈಸಲೈಟ್ , 3 ಬಂಗಾರದ ಲಕ್ಸ್ಮಿ ಪದಕ ಆಭರಣವನ್ನು ಅಂದಾಜು 2 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಹಾಗೂ ಸುಮಾರು 1 ಲಕ್ಷ ರೂಪಾಯಿ ಬೆಲೆಯ ಒಂದು ಪಲ್ಸರ್ ಮೋಟಾರ ಸೈಕಲ್‌ನ್ನು ಜಪ್ತಿ ಮಾಡಲಾಗಿದೆ.
ಈ ಆರೋಪಿತನು ಅಂತರ್ ರಾಜ್ಯ ಕಳ್ಳನಾಗಿರುತ್ತಾನೆ . ಉತ್ತರ ಕನ್ನಡ ಜಿಲ್ಲೆಯ ಕಾರವಾರ , ಯಲ್ಲಾಪುರ , ಭಟ್ಕಳ , ಸಿದ್ದಾಪುರ , ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ , ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ , ಹುಬ್ಬಳ್ಳಿ , ಹಾಗೂ ಹೊರ ರಾಜ್ಯವಾದ ಮಹಾರಾಷ್ಟ್ರ ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ .
ಅದಲ್ಲದೆ ಕಳೆದ 3-4 ವರ್ಷಗಳಲ್ಲಿ ಯಲ್ಲಾಪುರ ಪಟ್ಟಣ , ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಕಳ್ಳತನ ಮತ್ತು ಬ್ಯಾಂಕ ಕಳ್ಳತನವನ್ನು ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ .
ಈ ಹಿಂದೆ ಇದೇ ಪ್ರಕರಣದಲ್ಲಿ ದಿನಾಂಕ : 03-07-2021 ರಂದು ಇಬ್ಬರು ಆರೋಪಿತರನ್ನು ಬಂಧಿಸಿ ಅವರಿಂದ ಸುಮಾರು 42 ಗ್ರಾಂ ತೂಕದ ಬಂಗಾರದ ಆಭರಣಗಳಾದ 1 ನೆಕ್ಲೇಸ್ -1 ಉಂಗುರು -2 ಕಿವಿಯ ಕುಡುಕು 2 ಜೊತೆ , ಹಾಗೂ 100 ಗ್ರಾಂ ಬೆಳ್ಳಿಯ ಆಭರಣವನ್ನು ಅ.ಕಿ 2 ಲಕ್ಷ 20.ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತ ಪಡಿಸಿಕೊಂಡು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ .
ಶ್ರೀ ರವಿ ನಾಯ್ಕ, ಪೋಲೀಸ್ ಉಪಾಧೀಕ್ಷಕರು ಶಿರಸಿರವರ ಮಾರ್ಗದರ್ಶನದಲ್ಲಿ , ಶ್ರೀ ಸುರೇಶ ಯಳ್ಳೂರ , ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ . ಇವರ ನೇತ್ರತ್ವದಲ್ಲಿ ಶ್ರೀ ಮಂಜುನಾಥ ಗೌಡರ ಪಿ.ಎಸ್.ಐ . ಪ್ರೋ ಪಿಎಸ್‌ಐ ಮುಷಾಹಿದ್ ಅಹ್ಮದ್ , ಹಾಗೂ ಸಿಬ್ಬಂದಿಯವರಾದ , ಸಿ ಎಚ್ ಸಿ – ಮಹ್ಮದ ಶಫೀ , ಬಸವರಾಜ ಹಗರಿ , ಗಜಾನನ ನಾಯ್ಕ , ನಾಗಪ್ಪ ಲಮಾಣಿ , ಸಿಪಿಸಿ- ವಿನೋದಕುಮಾರ ರೆಡ್ಡಿ , ಬಸವರಾಜ ಡಿ.ಕೆ , ಚನ್ನಕೇಶವ , ಅಮರ ಜೀ , ಗಿರೀಶ ಲಮಾಣಿ , ನಂದೀಶ . ಚಿದಂಬರ ಅಂಗಡಿ , ವಿಜಯ ಜಾಧವ , ಮಪಿಸಿ ಶೋಭಾ ನಾಯ್ಕ , ಚಾಲಕರಾದ ಕೃಷ್ಣ ಮಾತ್ರೋಜಿ, ಹಾಗೂ ಕಾರವಾರದ ಟಿಕ್ನಿಕಲ್ ಸೆಲ್‌ನ ಸಿಬ್ಬಂದಿಯವರಾದ ಸುಧೀರ ಮಡಿವಾಳ , ರಮೇಶ ನಾಯ್ಕ , ಉದಯ ಗುನಗಾ ಇವರು ಸಹ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.