ಕುಮಟಾ : ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ ಕೆ ಭಂಡಾರಕರ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಸಾಧನೆ ಮುಂದುವರೆಸಿದ್ದಾರೆ.

ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ. 121 ವಿದ್ಯಾರ್ಥಿಗಳಲ್ಲಿ 16 ಮಂದಿ 600/600 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿರುವುದು ಸಂಸ್ಥೆಯ ಹೆಮ್ಮೆ ಹೆಚ್ಚಿಸಿದೆ.

ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಹದಿನೈದು ಬಾಲಕಿಯರು ಹಾಗೂ ಒಬ್ಬ ಬಾಲಕ ಪೂರ್ಣ ಅಂಕ ಪಡೆದು ಸಾಧನೆಗೈದಿದ್ದಾರೆ.

ಅಭಿಜ್ಞಾ ಆರ್ ಕಲಭಾಗ,ಅನನ್ಯಾ ಎನ್, ಅಪೂರ್ವಾ ಶಾನಭಾಗ,ಸಿವಿ ನಮೃತಾ ಜಿ ಆರ್ ಸಂಪ್ರೀತಿ,ಗ್ರೀಷ್ಮಾ ಪಾಂಡುರಂಗ. ನಾಗಾಂಜಲಿ ಪಿ ನಾಯ್ಕ ,ನಂದಿನಿ ಪೈ, ನಿಧಿ ಗಜನಕರ್ ಪೂರ್ಣಿಮಾ ಎಂ ಪಟಗಾರ ಸಂಪದಾ ಪಾವಸ್ಕರ್,ಶ್ರೇಯಾ ಶಾನಭಾಗ ತೇಜಸ್ವಿನಿ ಶಾನಭಾಗ ವರ್ಷಿತಾ ಪಟಗಾರ ವಸುಧಾಪ್ರಭು ,ವಿನಾಯಕ ಸಿ ಗೌಡ 600 ಕ್ಕೆ 600 ಅಂಕ ಗಳಿಸಿ ಸಾಧನೆಮಾಡಿದ್ದಾರೆ.

RELATED ARTICLES  ಕುಮಟಾ ರೋಟರಿ ನೂತನ ವರ್ಷದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ ಭಟ್.

ಉಳಿದಂತೆ 38 ವಿದ್ಯಾರ್ಥಿಗಳು ಶೇ 95 ಕ್ಕೂ ಹೆಚ್ಚು ಅಂಕ ಪಡೆದಿದ್ದು, 29 ವಿದ್ಯಾರ್ಥಿಗಳು ಶೇ 90 ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಶೇ85 ಕ್ಕಿಂತ ಹೆಚ್ಚು ಅಂಕವನ್ನು 15 ವಿದ್ಯಾರ್ಥಿಗಳು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 80 ಶೇ, 8 ವಿದ್ಯಾರ್ಥಿಗಳು 70 ಶೇ ಕ್ಕಿಂತ ಹೆಚ್ಚು ಅಂಕವನ್ನು ಹಾಗೂ 4 ಮಂದಿ ಶೇ 60 ಕ್ಕೂ ಮಿಗಿಲು ಅಂಕ ಪಡೆದಿದ್ದಾರೆ.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ನಡೆದರೆ ಉತ್ತಮ ಫಲಿತಾಂಶ ನೀಡಲು ಸಕಲ ರೀತಿಯಲ್ಲಿಯೂ ಸಿದ್ಧತೆನಡೆಸಿ ರಾಜ್ಯಮಟ್ಟದಲ್ಲಿ ದಾಖಲೆಯ ಪಲಿತಾಂಶ ನೀಡಲು ಉತ್ಸಾಹದಿಂದ ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ರದ್ದಾಗಿದ ವಿಷಯ ಬೇಸರವನ್ನುಂಟು ಮಾಡಿತ್ತು.

ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವ ದಿಸೆಯಲ್ಲಿ ಕೊಂಕಣದೊಂದಿಗೆ ವಿಧಾತ್ರಿ ಅಕಾಡೆಮಿಯ ಸರ್ವ ಉಪನ್ಯಾಸಕರೂ ಅವಿರತ ಪ್ರಯತ್ನ ಮಾಡುತ್ತಿದ್ದುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಿ ಪರೀಕ್ಷೆಗಾಗಿ ಸಿದ್ಧತೆ ಮಾಡಲಾಗಿತ್ತಾದರೂ ಕೊರೋನಾ ಕಾರಣ ಪರೀಕ್ಷೆ ನಡೆಯಲಿಲ್ಲ.

RELATED ARTICLES  ರಾಮಚಂದ್ರಾಪುರ ಮಠದಿಂದ ಬಾಲಕ, ಬಾಲಕಿಯರಿಗೆ ಗುರುಕುಲ

ಆದಾಗ್ಯೂ ಈ ಫಲಿತಾಂಶ ಸಂಸ್ಥೆಗೆ ಸಮಾಧಾನವನ್ನು ತಂದಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಅಣಿಗೊಳಿಸುವಲ್ಲಿ ಕೊಂಕಣ ಹಾಗೂ ವಿಧಾತ್ರಿ ಅಕಾಡಮಿ ನಿರತವಾಗಿದೆ.

ಕೊರೊನಾ ಆತಂಕದ ನಡುವೆಯೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಪದವಿಪೂರ್ವ ಕಾಲೇಜು ಉತ್ತಮ ಸಾಧನೆ ಮಾಡುತ್ತಿದ್ದು ವಿಜ್ಞಾನ ವಿಭಾಗವನ್ನು ಮುನ್ನೆಡೆಸುವ ವಿಧಾತ್ರಿ ಅಕಾಡೆಮಿಯ ಉಪನ್ಯಾಸಕರ ಸತತ ಪರಿಶ್ರಮದಿಂದ ಬರುವ ದಿನಗಳಲ್ಲಿ ಉತ್ತಮ ಸಾಧನೆಯನ್ನು ಗೈಯ್ಯುವತ್ತ ಸಂಸ್ಥೆಯು ಮುನ್ನಡೆಯುತ್ತಿದೆ.

ಸಾಧಕ ಸಕಲ ವಿದ್ಯಾರ್ಥಿಗಳಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸಕಲ ವಿಶ್ವಸ್ಥರು ವಿಧಾತ್ರಿ ಅಕಾಡೆಮಿ ಮತ್ತು ವ್ಯವಸ್ಥಾಪಕ ಗುರುರಾಜ ಶೆಟ್ಟಿಯವರು ಪ್ರಾಚಾರ್ಯ ಮಹೇಶ ಉಪ್ಪೀನ ಅವರು ಹಾಗೂ ಕೊಂಕಣದ ಸಕಲ ಉಪನ್ಯಾಸಕ ವೃಂದದವರು,ಮುಖ್ಯಾಧಾಪಕರುಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.