ಕುಮಟಾ : ಕೊಂಕಣ ಎಜ್ಯುಕೇಷನ್ ಟ್ರಸ್ಟ್‌ ನ ಬಿ. ಕೆ. ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ೨೦೨೦-೨೧ ನೇ ಸಾಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ವಾಣಿಜ್ಯ ವಿಭಾಗದ ಒಟ್ಟು ೩೫ ವಿದ್ಯಾರ್ಥಿಗಳಲ್ಲಿ ಶಾಂತಿಕಾ ಉಪಾಧ್ಯ ೯೯.೧೭ %, ಸ್ವಾತಿ ಜಿ. ಬಾಳಗಿ ೯೬.೮೩%, ಹಾಗೂ ಅನಿರುದ್ಧ ಭಟ್‌ಕೇರೆ ೯೫.೩೩% ಅಂಕ ಪಡೆದು ಕಾಲೇಜಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

RELATED ARTICLES  ಜು.‌ 20 ರಂದು ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ

ಉಳಿದಂತೆ ೧೩ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶೇ. ೯೦ ಕ್ಕಿಂತ ಹೆಚ್ಚು ಅಂಕ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

RELATED ARTICLES  ಜನಮನ ಗೆಲ್ಲುತ್ತಿರುವ "ಅಸ್ಮಿತಾಯ್" ಎಂಬ ಕೊಂಕಣಿ ಚಲನಚಿತ್ರ

ಸಾಧಕ ಸಕಲ ವಿದ್ಯಾರ್ಥಿಗಳಿಗೆ ಕೊಂಕಣ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸಕಲ ವಿಶ್ವಸ್ಥರು, ತ್ರಿಶಾ ಕ್ಲಾಸಸ್ ಮತ್ತು ಪ್ರಾಚಾರ್ಯ ಮಹೇಶ ಉಪ್ಪಿನವರು ಹಾಗೂ ಕೊಂಕಣದ ಸಕಲ ಉಪನ್ಯಾಸಕ ವೃಂದದವರು, ಮುಖ್ಯಾಧ್ಯಾಪಕರುಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.