ಪ್ರತಿಭಾ ಕಾರಂಜಿಯಲ್ಲಿ ಸಾಧನೆ:ಈ ಶೈಕ್ಷಣಿಕ ಸಾಲಿನ ನೆಲ್ಲಿಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಇಲ್ಲಿಯ ಗಿಬ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮಾರಿ ಶ್ರೇಯಾ ಶೇಟ್, ಮಹಾಲಕ್ಷ್ಮೀ ಶಾನಭಾಗ, ಜೋನನ ಮಾಲೇಕರ, ಭೂಮಿಕಾ ಹೆಗಡೆ, ನಂದಿತಾ ಭಟ್ಟ, ಪ್ರಿಯಾಂಕ ಗೌಡ, ವಿನಮ್ರ ಶೆಟ್ಟಿ, ನೇಹಾ ಭಟ್ಟ ಕ್ರಮವಾಗಿ, ಮರಾಠಿ ಕಂಠಪಾಠ, ಕೊಂಕಣಿ ಭಾಷಣ, ತುಳು ಭಾಷಣ, ಧಾರ್ಮಿಕ ಪಠಣ, ಸಂಸ್ಕøತ ಭಾಷಣ, ಚಿತ್ರಕಲೆ, ಅಭಿನಯ ಗೀತೆ, ಕಥೆಹೇಳುವ ಸ್ಪರ್ಧೆ, ದೇಶಭಕ್ತಿ ಗೀತೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಂತೆಯೇ ಕ್ವಿಜ್ ನಲ್ಲಿ ಚರಣರಾಜ ಹಾಗೂ ಗಗನ ಪ್ರಥಮ ಸ್ಥಾನ ಗಳಿಸಿದ್ದರೆ, ನಂದಿತಾ, ರಿಫಾ, ಗನಿ, ನಿದಾ, ಕವಾಲಿ ಮತ್ತು ಅರೇಬಿಕ್ ಪಠಣಗಳಲ್ಲೂ ಬಹುಮಾನ ಪಡೆದಿದ್ದಾರೆ.

RELATED ARTICLES  ಗಮನಸೆಳೆದ ಮಕ್ಕಳ ಬೇಡರ ವೇಷ

gibb primary
ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ:

2017-18 ನೆಯ ಸಾಲಿನ ವಲಯಮಟ್ಟದ ಕ್ರೀಡಾಕೂಟದಲ್ಲಿ ಗಿಬ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. 100 ಮೀ.ಈಟದಲ್ಲಿ ರಿತೇಶ, 600 ಮೀ.ಓಟದಲ್ಲಿ ತೇಜಸ್ವಿನಿ, 400 ಮೀ.ಓಟದಲ್ಲಿ ಗೋಪಿಕಾ ಪ್ರಥಮ ಸ್ಥಾನ ಪಡೆದರೆ, ಗುಂಡು ಎಸೆತದಲ್ಲಿ ಅಚಿಜಲಿ ದ್ವೀತಿಯ ಸ್ಥಾನ ಪಡೆದಿದ್ದಾಳೆ. ಗಂಡುಮಕ್ಕಳ ಕಬಡ್ಡಿಯಲ್ಲಿ ಸುಮಿತ್, ಆಕಾಶ, ಪವನ, ರಖಿಬ್, ಧ್ರುವ, ವಿಯ, ಅಂಕುಶ, ವೈಭವ, ಗಗನ್,ತಿಲಕ್, ಶ್ರೇಯಸ್, ಶಾಲೆಯನ್ನು ಪ್ರತಿನಿಧಿಸಿದ್ದಾರೆ.

RELATED ARTICLES  Latest Update : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆದ್ದವರಾರು..?