ಭಟ್ಕಳ: ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ಮಾತಿಗೆ ಮಾತು ಹತ್ತಿ ನಂತರ ಚಾಕುವಿನಿಂದ ಇರಿತದ ವರೆಗೆ ನಡೆದ ಘಟನೆ ವರದಿಯಾಗಿದೆ.

ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಲ್ಲದೇ, ಜಾತಿ ಹೆಸರು ಹೇಳಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿರುವ ಬಗ್ಗೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ದ್ವಿತೀಯ ಪಿಯು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಆರೋಪಿಗಳನ್ನು ತಾಲೂಕಿನ ಹೆಬಳೆ ಗಾಂಧಿನಗರದ ಜಗದೀಶ ವಾಸು ಮೊಗೇರ ಹಾಗೂ ಇಲ್ಲಿನ ಹುರುಳಿಸಾಲ ನಿವಾಸಿ ಈಶ್ವರ ಸಣ್ಣತಮ್ಮ ರಾಮಾ ನಾಯ್ಕ ಎಂದು ಗುರುತಿಸಲಾಗಿದೆ.

ಆರೋಪಿಗಳು ದಿನೇಶ ಗೊಂಡ ಹಾಗೂ ಮಾದೇವ ಗೊಂಡ ಎಂಬ ಇಬ್ಬರು ವ್ಯಕ್ತಿಗಳಿಗೆ ಹೊಡೆದಿದ್ದಲ್ಲದೇ, ದಿನೇಶ ರಾಮಾ ಗೊಂಡನ ಬೆನ್ನಿಗೆ ಆರೋಪಿ ಈಶ್ವರ  ಸಣ್ಣತಮ್ಮ ರಾಮಾ ನಾಯ್ಕ ಈತನು ಚಾಕುವಿನಿಂದ ಜೋರಾಗಿ ಇರಿದು ಗಾಯಗೊಳಿಸಿರುವುದಾಗಿ ಆರೋಪಿಸಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಪ್ರಕರಣ ದಾಖಲಿಸಿಕೊಂಡಿರುವ ಎಸೈ ಭರತ್ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES  ಕರ್ನಾಟಕದಲ್ಲಿ ಕೊರೋನಾ ಆರ್ಭಟ : ಒಂದೇ ದಿನ 48 ಸಾವಿರಕ್ಕೂ ಹೆಚ್ಚು ಪ್ರಕರಣ