ಕುಮಟಾ : ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ಇಂದು ಕಾರ್ಮಿಕ ಇಲಾಖೆ ವತಿಯಿಂದ ಹಾಗು ಸಚಿವರಾದ ಶ್ರೀ ಶಿವರಾಂ ಹೆಬ್ಬಾರ್ ಸಹಕಾರದಿಂದ ಬಂದಿರುವ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಕುಮಟಾದಲ್ಲಿ ಸಂಪನ್ನವಾಯಿತು.

ಕುಮಟಾದ ಸತ್ಯಸಾಯಿ ಸೇವಾ ಕ್ಷೇತ್ರದ ಆವರಣ ಉಪ್ಪಿನಗಣಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕ್ಕನಳ್ಳಿ ಹಾಗೂ ನೆಹರೂನಗರ ಭಾಗದವರಿಗೆ ೨೦೦ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು .

RELATED ARTICLES  ಕೊರೋನಾ ಸಂದರ್ಭದ ಸೇವೆಗೆ ಪ್ರೋತ್ಸಾಹ ಧನ ನೀಡುವಲ್ಲಿ ಸರಕಾರ ವಿಫಲ : ಕಾರವಾರದಲ್ಲಿ ವೈದ್ಯರುಗಳಿಂದ ಪ್ರತಿಭಟನೆ.

ಆಹಾರಧಾನ್ಯಗಳ ಕಿಟ್ ವಿತರಿಸಿದ ಶಾಸಕ ದಿನಕರ ಶೆಟ್ಟಿ ಮೋದಿಯವರು ಕರೋನಾ ಸಂದರ್ಭದಲ್ಲಿಯೂ ಬಿ.ಜೆ.ಪಿ ಸರಕಾರ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಸಹಾಯ ಮಾಡುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

RELATED ARTICLES  ದಸರಾ ಸ್ಪೆಷಲ್ ಸುವಿಧಾ ಎಕ್ಸ್‌ಪ್ರೆಸ್ ರೈಲನ್ನು ಕಾರವಾರದ ತನಕವೂ ಓಡಿಸಲು ನೈರುತ್ಯ ರೇಲ್ವೆ ಅನುಮತಿ

ಈ ಸಮಯದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೇಮಂತ್ಕುಮಾರ್ ಗಾವಂಕರ್ ,ಕಾರ್ಮಿಕ ನಿರೀಕ್ಷಕರಾದ ಡಾ ಜಿ ಜಿ ಹೆಗ್ಡೆ , ಎಂ ಜಿ ಭಟ್ ,ಅಶೋಕ್ ಪ್ರಭು,ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ್ , ಬಿಜೆಪಿ ನಗರಾಧ್ಯಕ್ಷ ಪ್ರಸಾದ್ ನಾಯಕ್ , ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ , ಪುರಸಭಾ ಸದಸ್ಯ ತುಳಸು ಗೌಡ , ವಿಶ್ವನಾಥ್ ನಾಯ್ಕ್ ಹಾಗು ಮತ್ತಿತರರು ಉಪಸ್ಥಿತರಿದ್ದರು .