ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು ಕೇವಲ 46 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.

ಇಂದಿನ ಹೆಲ್ತ ಬುಲೆಟಿನ್ ಪ್ರಕಾರ ಹೊನ್ನಾವರದಲ್ಲಿ ಇಂದು ಒಂದು ಸಾವು ಸಂಭವಿಸಿದೆ. ಉತ್ತರ ಕನ್ನಡದಲ್ಲಿ ಇಂದು ಒಂದು ಸಾವು ಸಂಭವಿಸುವ ಮೂಲಕ ಒಟ್ಟು ಸಾವಿಗೀಡಾದವರ ಸಂಖ್ಯೆ 718 ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ 4, ಅಂಕೋಲಾದಲ್ಲಿ 17, ಕುಮಟಾದಲ್ಲಿ 10, ಹೊನ್ನಾವರ 7, ಭಟ್ಕಳದಲ್ಲಿ 2, ಶಿರಸಿಯಲ್ಲಿ 4, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 1, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 46 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ವಿಜಯನಗರ ಸಾಮ್ರಾಜ್ಯದ ವೈಭವ ನೆನಪಿಸುವ ಹಂಪಿ ಉತ್ಸವ ಇಂದಿನಿಂದ ಚಾಲನೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 427 ಆಗಿದ್ದು, ಅವರಲ್ಲಿ 42 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 385 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 3, ಅಂಕೋಲಾ‌ 0, ಕುಮಟಾ 24, ಹೊನ್ನಾವರ 0, ಭಟ್ಕಳ 5, ಶಿರಸಿ 3, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 5, ಜೋಯ್ಡಾ 3 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 43 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಹೆಲ್ತ್ ಬುಲೆಟಿನ್ ಪ್ರಕಾರ ಅಂಕೋಲಾದಲ್ಲಿ ಅತಿಹೆಚ್ಚು ಅಂದರೆ 17 ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದರೆ, ಅತೀ ಹೆಚ್ಚು ಅಂದರೆ 24 ಜನ ಡಿಶ್ಚಾರ್ಜ ಆದವರು ಕುಮಟಾದ ಜನರು ಎಂಬುದು ಸಮಾಧಾನದ ಸಂಗತಿ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.