ಹೊನ್ನಾವರ: ಅಭಿನೇತ್ರಿ ಆಟ್ಸ ಟ್ರಸ್ಟ್ ನಿಲ್ಕೋಡ ವತಿಯಿಂದ ತೃತೀಯ ವರ್ಷವಾದ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆನಲೈನ್ ಮೂಲಕ ರಂಗಸಂಗವನ್ನು ಜುಲೈ 23ರಿಂದ ಜುಲೈ 29ರವರೆಗೆ ಪ್ರತಿದಿನ 6:30ರಿಂದ 9:30ರವೆಗೆ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ಕಣ್ಣಿ ಪ್ರಶಸ್ತಿ ಪ್ರಧಾನ, ಅಭಿನೇತ್ರಿ ಪ್ರಶಸ್ತಿ ಪ್ರಧಾನ ಆಯೋಜಿಸಲಾಗಿದೆ.

ಕಲಾರಂಗದಲ್ಲಿ ಮಿಂಚಿಮರೆಯಾದ ಕಣ್ಣಿ ನೆನಪಿನಲ್ಲಿ ಪ್ರತಿ ವರ್ಷ ಕಣ್ಣಿ ಪ್ರಶಸ್ತಿ ನೀಡುವ ಜೊತೆ ಕಲಾವಿದರಿಗೆ ಸಹಾಯಧನ ನೀಡಿ ಪೋತ್ಸಾಹಿಸುವ ಉದ್ದೇಶ ಹೊಂದಿದ್ದೇವೆ ಎಂದು ಟ್ರಸ್ಟನ ಅಧ್ಯಕ್ಷ ಶಂಕರ ಹೆಗಡೆ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು.

RELATED ARTICLES  10 Лучших Трендовых Индикаторов

ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದಲ್ಲಿ ಎಂ.ಪಿ.ಇ. ಸೊಸೈಟಿ ಸಹಕಾರದಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಡಾ. ಎಂ.ಪಿ.ಕರ್ಕಿ, ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕøತ ಹಿರಿಯ ಕಲಾವಿದ ಕೃಷ್ಣ ಯಾಜಿ ಬಳ್ಕೂರ್, ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್, ಕೃಷ್ಣಮೂರ್ತಿ ಭಟ್ ಶಿವಾನಿ, ಆಗಮಿಸಲಿದ್ದಾರೆ.

ಜು.23ರಂದು ಶ್ರೀರಾಮ ನಿರ್ಯಾಣ ತಾಳಮದ್ದಲೆ, ಜು.24ರಂದು ಶ್ರೀಕೃಷ್ಣದರ್ಶನ ಯಕ್ಷಗಾನ, ಜು.25ರಂದು ಕಾರ್ತವೀರ್ಯ ಯಕ್ಷಗಾನ, ಜು.26ರಂದು ಕಿರಾತಾರ್ಜುನ ಯಕ್ಷಗಾನ, ಜು.27ರಂದು ಸುದರ್ಶನ ಯಕ್ಷಗಾನ, ಜು.28ರಂದು ತಾಮ್ರಧ್ವಜ ತಾಳಮದ್ದಲೆ, ಜು.29ರಂದು ಮಾಯಾ ಮೋಹಿನಿಯಕ್ಷಗಾನ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದೆ.

RELATED ARTICLES  ಶಿರಸಿಯಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ: ಪೋಲೀಸರ ಬಲೆಗೆ ಆರೋಪಿಗಳು.

ಕೊನೆಯ ದಿನ ಕಣ್ಣಿ ಪ್ರಶಸ್ತಿಯನ್ನು ಬಡಗುತಿಟ್ಟಿನ ಹಾಸ್ಯ ಕಲಾವಿದ ರಮೇಶ ಭಂಡಾರಿ ಇವರಿಗೆ, ಅಭಿನೇತ್ರಿ ಪ್ರಶಸ್ತ್ರಿಯನ್ನು ಬಡಗುತಿಟ್ಟಿನ ಸ್ತ್ರೀವೇಶಧಾರಿ ಭಾಸ್ಕರ ಜೋಶಿ ಶಿರಳಗಿ ಇವರಿಗೆ ಪ್ರಧಾನ ಮಾಡಲಾಗುವುದು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತ್ರುವಾರಿ ಸಚೀವ ಶಿವರಾಮ ಹೆಬ್ಬಾರ, ಶಾಸಕರುಗಳಾದ ಸುನೀಲ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸಾಂಸ್ಕøತಿಕ ರಾಯಭಾರಿ ಪ್ರಮೋದ ಹೆಗಡೆ ಆಗಮಿಸಲಿದ್ದಾರೆ.