ಯಲ್ಲಾಪುರ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು ಇದೀಗ ಅರಬೈಲ್ ಬೆಟ್ಟದ ಬಳಿ ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರ ವ್ಯತ್ಯಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 63 ಕೆ ಹೊಂದಿಕೊಂಡು ಅರೆಬೈಲ್ ಘಟ್ಟದ ಬಳಿ ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ತೀವ್ರ ವ್ಯತ್ಯಯವಾಗಿದೆ.

RELATED ARTICLES  ಟಿಪ್ಪು ಜಯಂತಿಗೆ ವಿರೋಧ: ಕುಮಟಾದಲ್ಲಿ ಪ್ರತಿಭಟನಾ ಮೆರವಣಿಗೆ

ಇದೆ ಹೆದ್ದಾರಿಯಲ್ಲಿ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣಏರಿಕೆಯಾಗಿದ್ದು, ಹೆದ್ದಾರಿಯಲ್ಲಿ ನೀರು ನುಗ್ಗಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

RELATED ARTICLES  ಮದುವೆ ಮನೆಯಲ್ಲಿ ಮೊಳಗಿತು ನಿನಾದದ ಪ್ರೇಮ ಕವಿತೆಗಳ ಮಧುರ ಗಾನ.

ಯಲ್ಲಾಪುರ ಅಂಕೋಲ ವ್ಯಾಪ್ತಿಯ ಪೊಲೀಸ್,ಕಂದಾಯ,ಅರಣ್ಯ,ಹೆಸ್ಕಾಂ ಮತ್ತಿತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಗಳು ಸ್ಥಳದಲ್ಲಿ ಹಾಜರಿದ್ದು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.