ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 800, ಭಟ್ಕಳ 1200, ಹಳಿಯಾಳ 700, ಹೊನ್ನಾವರ 1,000, ಜೋಯ್ಡಾ 500, ಕಾರವಾರ 1,200, ಮುಂಡಗೋಡ 800, ಕುಮಟಾ 1,200, ಸಿದ್ದಾಪುರ 800, ಯಲ್ಲಾಪುರ 800, ದಾಂಡೇಲಿ 500, ಡಿವಿಎಸ್ 900 ಲಸಿಕೆ ಲಭ್ಯವಿದೆ.
ಜಿಲ್ಲೆಯ ವಿವಿಧೆಡೆ ಕೊರೊನಾ ವ್ಯಾಕ್ಸಿನ್ ನೀಡಲು ಕ್ಯಾಂಪ್ ಮಾಡಿ ಲಸಿಕೆ ನೀಡಲಾಗುತ್ತಿದ್ದು, ಜು.23 ಶುಕ್ರವಾರ ಶಿರಸಿ ತಾಲೂಕಿನಲ್ಲಿ ಒಟ್ಟೂ 1,200 ಡೋಸ್ ಕೋವಿಶೀಲ್ಡ್ ಲಸಿಕೆಯಿದ್ದು, ಅದರಲ್ಲಿ 1,100 ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವ ಗ್ರಾಮಾಂತರ ಭಾಗದ ಜನರಿಗೆ ನೀಡಲಾಗುತ್ತದೆ. ಮತ್ತು ಉಳಿದ 100 ಲಸಿಕೆಯಲ್ಲಿ ಶಾಲಾ ಶಿಕ್ಷಕರಿಗೆ, ಶಾಲಾ ಅಡುಗೆಯವರಿಗೆ ಹಾಗು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
1,100 ಡೋಸ್ ಲಸಿಕೆಯಲ್ಲಿ ತಾಲೂಕಿನ ಬನವಾಸಿಯಲ್ಲಿ 200, ಬಿಸಲಕೊಪ್ಪದಲ್ಲಿ 200, ರೇವಣಕಟ್ಟಾದಲ್ಲಿ 150, ದೇವನಳ್ಳಿ 100, ಸಾಲ್ಕಣಿ 100, ಕಕ್ಕಳ್ಳಿ 100, ಮೆಣಸಿ 50, ಸುಗಾವಿ 100, ದಾಸನಕೊಪ್ಪ 100 ಡೋಸ್ ಲಸಿಕೆ ದೊರೆಯಲಿದೆ.