ಕುಮಟಾ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹರಿಟಾ ಗ್ರಾಮದ ಗಿರಿಜಾ ಸುಬ್ರಾಯ ಶೆಟ್ಟಿಯವರ ಮನೆಯ ಮೇಲ್ಛಾವಣಿಯು ಗುರುವಾರ ಕುಸಿದಿದ್ದು, ತೀವ್ರ ಹಾನಿ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಗಾಳಿ ಮಳೆಗೆ ಗಿರಿಜಾ ಕುಟುಂಬದವರು ವಾಸಿಸುತ್ತಿರುವ ಮನೆಯ ಒಂದು ಭಾಗದ ಗೋಡೆ ಸಮೇತ ಮೆಲ್ಛಾವಣಿ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿದ್ದ ಹಲವು ಅಗತ್ಯ ವಸ್ತುಗಳು ಸೇರಿದಂತೆ ಇನ್ನಿತರ ಪರಿಕರಗಳು ಹಾನಿಯಾಗಿದೆ. ಮೇಲ್ಛಾವಣಿ ಕುಸಿದ ಪರಿಣಾಮ ಹಲವು ಹಂಚುಗಳು ಒಡೆದು ಹೋಗಿದ್ದು, ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ 10/05/2019ರ ರಾಶಿಫಲ

ಈ ಬಗ್ಗೆ ವಿಷಯ ತಿಳಿದ ಜಿ.ಪಂ ನಿಕಟಪೂರ್ವ ಸದಸ್ಯ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಸ್ವತಃ ತಾವೇ ಗ್ರಾಮ ಲೆಕ್ಕಾಧಿಕಾರಿಯನ್ನು ಸ್ಥಳಕ್ಕೆ ಕರೆದೊಯ್ದು ಹಾನಿಗೊಂಡ ಮನೆಯವರಿಗೆ ಸಾಂತ್ವನ ತಿಳಿಸಿದರು. ಅಲ್ಲದೇ, ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ, ಶೀಘ್ರದಲ್ಲೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES  ಐಎಂಎ ಹಗರಣ: ಬಹುಕೋಟಿ ವಂಚಕ ‘ಮನ್ಸೂರ್ ಖಾನ್’ ಬಂಧನ.!

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ವಿನಾಯಕ ನಾಯ್ಕ, ಪ್ರಮುಖರಾದ ಕಾರ್ತಿಕ ಭಟ್ಟ, ನಿಲೇಶ ವಾರೇಕರ ಸೇರಿದಂತೆ ಇನ್ನಿತರರು ಇದ್ದರು.

FB IMG 1626982343606