ಕುಮಟಾ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಹತ್ತಾರು ಮನೆಗಳು ಧರೆಗುರುಳಿವೆ. ರಕ್ಕಸದ ಅಲೆಗಳಿಗೆ ಕಡಲತೀರಗಳು ಕೊಚ್ಚಿ ಹೋಗಿ ಬಲೆ, ಬೋಟ್ ಗಳಿಗೆ ಸಾಕಷ್ಟು ಹಾನಿಯಾಗಿದೆ.
ಕುಮಟಾ ತಾಲೂಕಿನ ಅಘನಾಶಿನಿ ನದ್ದಿ, ಉಕ್ಕಿ ಹರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು ನಿಗ್ಗಿದೆ. ದಿವಗಿ, ಮಿರ್ಜಾನ್, ಹೆಗಡೆ, ಕೋಡ್ಕಣಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದೆ. ಅಕ್ಷರಶಃ ದೀವಗಿ ಗ್ರಾಮ ನೀರಿನಲ್ಲಿ ಮುಳುಗಿದಂತೆ ಭಾಸವಾಗುತ್ತಿದೆ.
ದಿವಗಿಯ ಕೆಳಗಿನಕೇರಿಯಲ್ಲಿ ಮನೆಗೆ ಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿ, ಬತ್ತದ ಗದ್ದೆ ಸೇರಿದಂತೆ ಮನೆಗಳಿಗೂ ನೀರು ನುಗ್ಗಿದೆ. ಈ ಭಾಗದ ನದಿ ತೀರದ ಜನರು ಮಳೆ ತಗ್ಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಘನಾಶಿನೀ ನದಿಯಲ್ಲಿ 1982 ರಲ್ಲಿ ನೀರು ತುಂಬಿದ ಮಟ್ಟಕ್ಕೆ ಇನ್ನು ಒಂದು ಅಡಿ ಬಾಕಿ.ಇನ್ನೂ ನಾಲ್ಕು ಅಡಿ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.
ಜು.27ರವರೆಗೂ ಧಾರಾಕಾರ ಮಳೆ ಮುನ್ಸೂಚನೆ
ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಜನ ಜೀವನ ಭಾಗಶಃ ಅಸ್ತವ್ಯಸ್ತಗೊಂಡಿದೆ. ಜುಲೈ 27ರವರೆಗೂ ಇದೇ ರೀತಿ ಹೆಚ್ಚಿನ ಮಳೆಯಾಗುವ ಸಂಭವವನ್ನು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 27ರವರೆಗೂ ಧಾರಾಕಾರ ಮಳೆಯಾಗುವ ಮುನ್ಸೂಚನೆಯಿದ್ದು ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಉಡುಪಿ ದಕ್ಷಿಣಕನ್ನಡ ಜಿಲ್ಲೆಗಳಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.