ಹೊನ್ನಾವರ : ತಾಲೂಕಿನಲ್ಲಿ ಕಳೆದ ಕೆಲ ದಿನದಿಂದ ಮಳೆ ಆರ್ಭಟ ಜೋರಾಗಿದ್ದು, ಕಳೆದ ಒಂದು ವಾರದಿಂದ ಸುರಿಯಿತ್ತಿರುವ ಗಾಳಿ ಮಳೆಗೆ, ಹಳದೀಪುರ ಹಲವೆಡೆ ಮನೆಗೆ ಹಾನಿ ಸಂಭವಿಸಿದೆ. ಮನೆಯ ಗೋಡೆ ಕುಸಿದಿದೆ. ಹಲವೆಡೆ ಮರಬಿದ್ದು ಹಾನಿಯಾಗಿದೆ.

ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಶಂಕ್ರುಕೇರಿಯಲ್ಲಿ ಗಣಪಿ ಕೃಷ್ಣ ಗೌಡ ಇವರ ಮನೆಯ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿ ಹಾನಿ ಸಂಭವಿಸಿದೆ. ಇದೇ ಗ್ರಾಮದ ವಿಜಯ ರಮಾಕಾಂತ ಹಳದೀಪುರ ಒವರ ಮನೆಯ ಗೋಡೆ ಕುಸಿದು ಬಿದ್ದಿದೆ.

RELATED ARTICLES  ಗಣಿತದೊಲುಮೆ ಕರುಣಿಸು ಗುರುವೇ ಹೇ ದೇವ!

ಸಾಲ್ಕೋಡ ಗ್ರಾಮದ ಕಾನಕ್ಕಿಯ ನಾರಾಯಣ ಹರಿಯಾ ಮರಾಠಿ ಇವರ ಮನೆಯ ಮೇಲ್ಚಾವಣೆ ಹಾನಿಯಾಗಿದೆ. ಮಾಗೋಡ ಗ್ರಾಮದ ಕುಚ್ಚೋಡಿಯ ಇಸ್ಮಾಯಿಲ್ ಖಾನ್ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿ ಸಂಭವಿಸಿದೆ.

RELATED ARTICLES  ಪ್ರಾಯೋಗಿಕ ಕೌಶಲ್ಯದಿಂದ ಜೀವನದ ಯಶಸ್ಸು ಸಾಧ್ಯ.

ಕಡತೋಕ ಗ್ರಾಮದ  ಹೆಬ್ಲೆಕೊಪ್ಪ ಕುಪ್ಪು ರಾಮ ಮುಕ್ರಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ. ಹಾನಿ ಸಂಭವಿಸಿದ ಮನೆಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.