ಕಾರವಾರ: ಮಳೆಯಿಂದಾಗಿ ಉತ್ತರಕನ್ನಡದ ಜನರು ಹೈರಾಣಾಗುತ್ತಿದ್ದಾರೆ. ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ನದಿಯಂಚಿನ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಕಳೆದ ಐದಾರು ದಶಕಗಳಿಗಿಂತ ಅಂದರೆ 1963ರಿಂದ 1965ರ ಅವಧಿ ಹಿಂದೆ ಬಂದಿದ್ದ ಪ್ರವಾಹಕ್ಕಿಂತ ಈಗಿನ ಪ್ರವಾಹದ ಪ್ರಮಾಣ ದೊಡ್ಡದು ಎನ್ನಲಾಗಿದೆ.
ಸುಂಕಸಾಳ ವ್ಯಾಪ್ತಿಯಲ್ಲಿ ರಾತ್ರಿ ಹೆದ್ದಾರಿಗೆ ನೀರು ನುಗ್ಗಿರುವುದರಿಂದ ಅಂಕೋಲಾ ಹುಬ್ಬಳ್ಳಿ ಸಂಚಾರ ಮಾರ್ಗ ಸಂಪೂರ್ಣ ಬಂದ್ ಆಗಿದ್ದು,ಬಾಳೆಗುಳಿ ಬಳಿ ಕಿಲೋಮೀಟರ್ಗೆ ಹೆಚ್ಚು ಉದ್ದದ ವಾಹನಗಳ ಸಾಲು ಕಂಡು ಬರುತ್ತಿದೆ.
ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು,ರ ಸ್ತೆ ಸಂಪರ್ಕ ಕಡಿದು ಹೋಗಿದೆ. ಸೇತುವೆಯ ವ್ಯವಸ್ಥೆಯು ಇರದಿರುವುದರಿಂದ ಜನರ ಜೀವ ರಕ್ಷಣೆಗೆ ತಾಲೂಕು ಆಡಳಿತ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳು ಶಕ್ತಿಮೀರಿ ಪ್ರಯತ್ನಿಸುತ್ತೇವೆ.
ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕಲ್ಲೇಶ್ವರ ಮತ್ತಿತರ ಭಾಗದ ನೆರೆ ಪೀಡಿತ ಪ್ರದೇಶದಲ್ಲಿ ಸಿಲುಕಿದವರ ಜೀವ ರಕ್ಷಣೆಗೆ ಹೆಲಿಕಾಫ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ .
ಶಿರೂರು ವ್ಯಾಪ್ತಿಯಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿರುವ ನಡುವೆಯೇ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಹೋಗಿದ್ದಾರೆ ಎನ್ನಲಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ದೋಣಿ ಮಗುಚಿ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.
ಬೆಳಂಬರ ಸಮುದ್ರತೀರದಲ್ಲಿ ಕಟ್ಟಿಗೆಗಳ ರಾಶಿರಾಶಿ ತೇಲಿಬರುತ್ತಿದೆ.ಮಂಜುಗುಣಿಯಲ್ಲಿ ಪಂಚಾಯತ್ ವತಿಯಿಂದ ನೆರೆ ರಕ್ಷಣಾ ಕಾರ್ಯಕ್ಕೆ ಮೀಸಲಿರಿಸಿದ್ದಚಿಕ್ಕ ಬೋಟೊಂದು ಕೊಚ್ಚಿಹೋಗಿದೆ ಎನ್ನಲಾಗಿದೆ.
ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ,ಮೊಬೈಲ್ ನೆಟ್ವರ್ಕ್ ಸಮಸ್ಯೆ ಇನ್ನಿತರ ಕಾರಣಗಳಿಂದ ರಕ್ಷಣಾ ತಂಡದ ಸಂಪರ್ಕ-ಸಂವಹನಕ್ಕೂ ತೀವ್ರ ಹಿನ್ನಡೆಯಾಗುತ್ತಿದೆ.
ವಾಸ್ರೆ – ಶಿರಗುಂಜಿ, ಕೂರ್ವೆ, ಬಿಳಿ ಹೊ೦ಯ್ಗೆ, ಸಗಡಗೇರಿ ಯ ಬಹುತೇಕ ಭೂಪ್ರದೇಶ ಜಲಾವೃತವಾಗಿವೆ. ತಾಲೂಕಿನ ಎಂಟತ್ತು ಗ್ರಾಮಪಂಚಾಯತಿಗಳಲ್ಲಿ ಜನಜೀವನ ಅತಂತ್ರವಾಗಿದ್ದು, ಹಲವೆಡೆ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆಗಿದ್ದು, ಜನ ಕಂಗಾಲಾಗಿದ್ದಾರೆ ಗಂಗಾವಳಿ ನದಿ ನೀರಿನ ಮಟ್ಟದ ಏರಿಕೆಯಿಂದ ಅಂಕೋಲಾ ಕುಮಟಾ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಶಿರೂರು ಬಳಿ ಹೆದ್ದಾರಿಗೆ ನೀರು ನುಗ್ಗಿ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದೆ ಎನ್ನಲಾಗಿದೆ.