ಕುಮಟಾ: ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆಸಲಾಗುವ ಅಸಮರ್ಪಕ ಪರೀಕ್ಷಾ ಪದ್ದತಿಯನ್ನು ಕೈಬಿಟ್ಟು ಸಮರ್ಪಕವಾಗಿ ಪರೀಕ್ಷೆ ನಡೆಸವಂತಾಗಬೇಕು ಎಂದು ಆಗ್ರಹಿಸಿ ಡಾ.ಎ.ವಿ.ಬಾಳಿಗಾ ಕಾಲೇಜಿನ ಪದವಿ ವಿದ್ಯಾರ್ಥಿಗಳು ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಪದವಿ ಶಿಕ್ಷಣದ 1,3,5 ಸೆಮಿಷ್ಟರ್ ಪರೀಕ್ಷೆಗಳನ್ನು ಮಾರ್ಚ,ಏಪ್ರೀಲ್ ತಿಂಗಳಿನಲ್ಲಿ ನಡೆಸದೆ ವಿವಿಧ ಕಾರಣಗಳಿಂದ ಮುಂದೂಡಿ ಪರೀಕ್ಷೆ ನಡೆಸದೆ ಕಳೆದ ಮೇ 17 ರಿಂದ 2,4,6 ಸೆಮಿಷ್ಟರ್ ತರಗತಿಗಳನ್ನು ಆರಂಬಿಸಿದೆ. ಮೇ 17 ರಿಂದ ತರಗತಿಗಳನ್ನು ಪ್ರಾರಂಭಿಸಿ ಅ.14 ರವರೆಗೆ ಪಾಠ,ಪ್ರವಚನ ಮಾಡಲು ಅವಕಾಶ ಕಲ್ಪಿಸಿ ಪ್ರಸ್ತುತ ಅ.7 ರಿಂದ ಪಾಠ,ಪ್ರವಚನ ನಿಲ್ಲಿಸುವಂತೆ ಸೂಚಿಸಿದೆ. ಅಲ್ಲದೆ 2,4,6 ನೇ ಸೇಮಿಷ್ಟರ್ ಆರಂಭದಲ್ಲಿ 1,3,5 ಸೇಮಿಷ್ಟರ್ ಪರೀಕ್ಷೆಗಳನ್ನು ಅಗಷ್ಟ 20 ರಿಂದ ಆರಂಭಿಸಿ ಸೆಪ್ಟೆಂಬರ್ ನಿಂದ 2,4,6 ತರಗತಿಗಳನ್ನು ಆರಂಭಿಸುವುದಾಗಿ ಪ್ರಕಟಿಸಿದೆ. ನಂತರ 2,4,6 ಸೇಮಿಷ್ಟರ್ ಪರೀಕ್ಷೆಗಳನ್ನು ಬಹು ಆಯ್ಕೆ ಪ್ರಶ್ನೆಗಳ ಮೂಲಕ ಒಂದುವರೇ ತಾಸಿನ ಪರೀಕ್ಷೆ ನಡೆಸುವುದಾಗಿ ತಿಳಿಸಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಈ ಪದ್ದತಿಯನ್ನು ಅನುಮೊದಿಸುವಂತೆ ತಿಳಿಸಿ ತನ್ನ ವೆಬ್‍ಸೈಟ್ ಕೆಲ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಿದೆ.

RELATED ARTICLES  ಬಿಜೆಪಿ ಕಾರ್ಯಕರ್ತ ಮೊಹಮ್ಮದ್ ಗೌಸ್ ಸಾವಿಗೆ ಆರೋಗ್ಯ ಇಲಾಖೆ ನೇರ ಹೊಣೆ: ಅನಂತಮೂರ್ತಿ ಹೆಗಡೆ

ಈಗಾಗಲೆ ಈ ಬಹು ಆಯ್ಕೆ ಪದ್ದತಿಯಲ್ಲೇ ಪಾಠ,ಪ್ರವಚನಗಳು ನಡೆದಿವೆ.ಹೀಗಾಗಿ ನಾವು ಬಹು ಆಯ್ಕೆ ಪದ್ದತಿಯ ಪರೀಕ್ಷೆಗೆ ಮಾನಸಿಕವಾಗಿ, ಬೌದಿಕವಾಗಿ ಸಿದ್ದರಾಗಿದ್ದೇವೆ. ಈ ನಡುವೆ ಯು.ಜಿ.ಸಿ ಯವರು ಕೇವಲ ಅಂತಿಮ ಸೇಮಿಷ್ಟರ್ ಪರೀಕ್ಷೆಗಳನ್ನು ಮಾತ್ರ ನಡೆಸುವಂತೆ ಸೂಚಿಸಿದೆ.ಅಲ್ಲದೆ ಮಧ್ಯಂತರ ಸೇಮಿಷ್ಟರ್ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳ ಆಧಾರದಲ್ಲಿ ಪ್ರಮೋಟ್ ಮಾಡಿ ಮುಂದಿನ ತರಗತಿಗಳಿಗೆ ಪ್ರವೇಶ ನೀಡಲು ಸೂಚಿಸಿದೆ. ಇಂತಹ ಅಸಮರ್ಪಕ ಪರೀಕ್ಷಾ ವಿಧಾನದಿಂದ ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆ ಓಳಗಾಗಿದ್ದು ತಕ್ಷಣ ಸಮರ್ಪಕ ಪರೀಕ್ಷಾ ವಿಧಾನಗಳನ್ನು ಅಳವಡಿಸಿ ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

RELATED ARTICLES  ದಿನಕರ‌ ಶೆಟ್ಟಿಯವರ ಪರ‌ ಪ್ರಚಾರ ಬಿರುಸು: ಕಮಲ ಪಾಳಯದಲ್ಲಿ ಉತ್ಸಾಹ

ಪವನ್ ಪ್ರಭು,ಪ್ರಣವ್ ಪಂಡಿತ,ಸರ್ವೇಶ ಪೈ ,ಸುದರ್ಶನ ಭಟ್ಟ, ಸಂಪ್ರಿತ್ ಭಂಡಾರಿ, ಅಭಿಷೇಕ ದಿವಾಕರ, ದರ್ಶನ ಜೆ.ಪಿ, ಪ್ರತ್ವಿಕ್ ಮಡಿವಾಳ,ಯೋಗಿನಿ ಭಂಡಾರಕರ, ಇನ್ನಿತರರು ಇದ್ದರು.

IMG 20210723 WA0035

ಹೊನ್ನಾವರದಲ್ಲಿಯೂ ದಿನಾಂಕ 23/07/2021 ರಂದು ಎಸ್. ಡಿ. ಎಮ್. ಪದವಿ ಕಾಲೇಜಿನ ವಿದ್ಯಾರ್ಥಿಗಳು ಕವಿವಿ ಧಾರವಾಡ ನಡೆಸುತ್ತಿರುವ ಪದವಿ ಪರೀಕ್ಷೆಯಿಂದಾಗುವ ಸಮಸ್ಯೆಯ ಪರಿಹಾರದ ಕುರಿತ ಮನವಿ ಪತ್ರವನ್ನು ಹೊನ್ನಾವರ ತಹಶೀಲ್ದಾರರಿಗೆ ಸಲ್ಲಿಸಿದರು.
ಸ್ಥಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಉಪಸ್ಥಿತರಿದ್ದರು.