ಹೊನ್ನಾವರ : ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮತ್ತು ಕೆ.ಪಿ.ಸಿ.ಸಿ.ಸದಸ್ಯ ಪ್ರಶಾಂತ ದೇಶಪಾಂಡೆ ೧೮೪ ಜನರಿಗೆ “ಸಹಾಯ ಹಸ್ತ” ಮೆಡಿಕಲ್ ಕಿಟ್ ರವಾನಿಸಿ ಅಭಿನಂದಿಸಿದ್ದಾರೆ.

ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನೇತ್ರತ್ವದಲ್ಲಿ ಕಾಂಗ್ರೆಸ್ ಮುಖಂಡರು ನಗರದ ಸರಕಾರಿ ಆಸ್ಪತ್ರೆಗೆ ತೆರಳಿ ತಾಲ್ಲೂಕು ಆರೋಗ್ಯಧಿಕಾರಿ ಡಾ.ಉಷಾ ಹಾಸ್ಯಗಾರ , ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಅವರಿಗೆ ಹಸ್ತಾಂತರಿಸಿದರು.ನಂತರ ಹಳದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ.ವೈಶಾಲಿ ನಾಯ್ಕರಿಗೆ, ಕಡ್ತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ.ಮಂಜುನಾಥರಿಗೆ, ಸಾಲ್ಕೋಡ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ತೆರಳಿ ಡಾ.ಸಂತೋಷರಿಗೆ, ಅವರ ಸಿಬ್ಬಂದಿಗಳ ಸಮ್ಮುಖದಲ್ಲಿ ಕಿಟ್ ಹಸ್ತಾಂತರಿಸಲಾಯಿತು.

RELATED ARTICLES  ಭೂಮಿ ಇರುವದೇ ತನಗಾಗಿ ಎನ್ನುವ ಮನಷ್ಯನ ಧೋರಣೆಯಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ: ಶಿವಾನಂದ ಕಳವೆ

ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಕೇಶವ ಮೇಸ್ತ,ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ, ಯುವ ಅಧ್ಯಕ್ಷ ಸಂದೇಶ ಶೆಟ್ಟಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ,ಅಲ್ಪಸಂಖ್ಯಾತ ಅಧ್ಯಕ್ಷ ಜಕ್ರಿಯ್ಯಾ ಶೇಖ,ಮಹಿಳಾ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ,ಬಿಸಿಸಿ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ,ಕೃಷ್ಣ ಮಾರಿಮನೆ,ಗಜು ನಾಯ್ಕ,ಲಂಭೋದರ ನಾಯ್ಕ, ಹಳದೀಪುರ ಅಧ್ಯಕ್ಷ ಜನಾರ್ದನ ,ಬಾಲಚಂದ್ರ ನಾಯ್ಕ,ಮಂಜುನಾಥ ಖಾರ್ವಿ,ಮಾದೇವ ನಾಯ್ಕ,,ಹನೀಪ್ ,ಕೃಷ್ಣ ಹರಿಜನ,ಜೋಸೆಫ್ ಡಿಸೋಜ,ರಾಘು ಮೇಸ್ತ ಇದ್ದರು.

RELATED ARTICLES  ಅಟಲ್ ಚಿತಾಭಸ್ಮದ ಮೆರವಣಿಗೆ: ಮೌನ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ಕುಮಟಾ ಜನತೆ.