ಕುಮಟಾ:  ಮಳೆಯಿಂದಾಗಿ ಅಕ್ಷರಶಹ ಉತ್ತರ ಕನ್ನಡದ ಜನ ತತ್ತರಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಬಹುತೇಕ ಕಡೆ ಸಂಚಾರ ಅಸ್ತವ್ಯಸ್ತವಾಗಿದೆ.

ಇದೀಗ ಕುಮಟಾ ಶಿರಸಿ ರಸ್ತೆ ಸಂಚಾರ ಕೂಡಾ ತಾತ್ಕಾಲಿಕವಾಗಿ ಬಂದ್ ಆಗಿದೆ. ನಿನ್ನೆ ದಿನ ಶಿರಸಿಯ ಹಲವೆಡೆ ನದಿಗಳು ತುಂಬಿ ಜನಜೀವನ ಅಸ್ತವ್ಯಸ್ಥ ವಾಗುವ ಜೊತೆಗೆ ವಾಹನ ಸಂಚಾರ ವ್ಯತ್ಯಯವಾಗಿತ್ತು.

RELATED ARTICLES  ಗೋ ಸಾಕಣೆ ನಮ್ಮ ಧರ್ಮವಾಗಬೇಕಿದೆ : ಮಾರುತಿ ಗುರೂಜಿ

ಭಾರೀ ಮಳೆಯಿಂದಾಗಿ ಕತಗಾಲಿನ ಅಳಕೋಡ್ ಹತ್ತಿರ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾಗಿದ್ದ ಗಜಾನನ ಪೈ ಸ್ಥಳದಲ್ಲಿ ಹಾಜರಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ನೆರವಾಗುವ ಮೂಲಕ ಸರಳತೆ ಮೆರೆದಿದ್ದಾರೆ.

ಸಂಕಷ್ಟದಲ್ಲಿರುವ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದ ಜನರ ಜೊತೆಗೆ ಗಜಾನನ ಪೈ ತಾವೂ ಭಾಗವಹಿಸುವ ಮೂಲಕ ಸರಳತೆ ಮೆರೆದಿದ್ದಾರೆ.  ಸೂಕ್ತ ಸ್ಥಳಗಳಿಗೆ ವಸ್ತುಗಳನ್ನು ಸ್ಥಳಾಂತರಿಸಲು, ಹಾಗೂ ನೀರು ತುಂಬಿದ ಜಾಗದಲ್ಲಿ ವಾಹನ ಓಡಾಟದವರಿಗೆ ನೆರವಾಗಿ ಗಮನ ಸೆಳೆದರು.

RELATED ARTICLES  ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ ಬಿರುಸಿನ‌ ಪ್ರಚಾರ : ಎಲ್ಲೆಡೆ ಮೊಳಗಿತು ಜೆಡಿಎಸ್ ಘೋಷ

ತಮ್ಮ ಸರಳತೆಯಿಂದಲೇ ಸದಾಕಾಲ ಜನತೆಯ ಪ್ರೀತಿಗೆ ಪಾತ್ರರಾಗುವ ಗಜು ಪೈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆಯ ಜೊತೆಗೆ ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯಮಾಡುವ ಮೂಲಕ ಮತ್ತೊಮ್ಮೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.