ಕುಮಟಾ: ಅರಣ್ಯವಾಸಿಗಳು ಪರಿಸರಪರವಿದ್ದು ಅರಣ್ಯ ಇಲಾಖೆಯ ತಪ್ಪಾದ ನೀತಿಯಿಂದ ಜಿಲ್ಲೆಯಲ್ಲಿ ಅರಣ್ಯ ಸಾಂದ್ರತೆ ಕಡಿಮೆಯಾಗುತ್ತಿದೆ. ಅರಣ್ಯ ಇಲಖೆಯ ಅರಣ್ಯ ವಿರೋಧಿ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಕುಮಟಾ ತಾಲೂಕಿನ ಬೆಟ್ಕುಳಿಯಲ್ಲಿ ‘೩೦ ವರ್ಷ ಹೋರಾಟ- ೩೦ ಸಾವಿರ ಗಿಡ’ ನೆಡುವ ಕುಮಟ ತಾಲೂಕಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

RELATED ARTICLES  ಛಲದಂಕ ಚಕ್ರೇಶ್ವರನಾಗಿ ಮೆರೆದ ಚಿಟ್ಟಾಣಿ

ಜಿಲ್ಲೆಯ ಪರಿಸರ, ನೆಲ, ಜಲ ವಿರೋಧಿ ಅಕೇಶಿಯಾ ಗಿಡ ನೇಡುವದು, ದಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಐದು ವರ್ಷದಲ್ಲಿ ಒಂದು ಲಕ್ಕಕ್ಕೂ ಮಿಕ್ಕಿ ಗಿಡಗಳನ್ನು ಕಾಮಗಾರಿ, ಅಭಿವೃದ್ಧಿ ನೇಪದಲ್ಲಿ ನಶಪಡಿಸಿರುವದು ಅರಣ್ಯ ಇಲಾಖೆಯ ಪರಿಸರ ವಿರೋಧಿ ನೀತಿಯಾಗಿದೆ. ಇಂತಹ ಪ್ರವೃತ್ತಿಯನ್ನು ಅರಣ್ಯ ಇಲಾಖೆ ಬಿಡಬೇಕೆಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ವಹಿಸಿದ್ದರು. ಶಿರಸಿ ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳಕ್ಕನವರ, ಜಿಲ್ಲಾ ಸಂಚಾಲಕ ಯಾಕೂಬ್ ಸಾರಂಬಿ, ಯಾಕೂಬ್ ಹೊಡೆಕರ್, ಸಾರಾಬಿ ಅಬ್ದುಲ್ ಲತಿಫ್, ರಾಮಚಂದ್ರ ಪಟಗಾರ, ಮಹಮ್ಮದ ಗೌಸ್ ಹೊಡೆಕರ, ಅಬ್ದುಲ್ ಮುಸ್ಸಿ ಪಡುವಣಿ, ತಿಪ್ಪಯ್ಯ ವೆಂಕಪ್ಪ ಹರಿಕಾಂತ, ಬಾಬು ಸುಬ್ರಾಯ ಹರಿಕಾಂತ, ಗೋಪಾಲ ಶಿವು ನಾಯ್ಕ, ಜಗ್ಗೇಶ ಹರಿಕಾಂತ ಮುಂತಾದವರು ನೇತ್ರತ್ವವನ್ನು ವಹಿಸಿದ್ದರು.

RELATED ARTICLES  ಐದನೇ ವರ್ಷ ನೂರಕ್ಕೆ ನೂರು ಫಲಿತಾಂಶ …!