ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾದರೂ ಜನತೆಯ ಕಣ್ಣೀರು ಮಾತ್ರ ತೀರಿಲ್ಲ. ವರುಣಾರ್ಭಟದಿಂದ ತಾಲೂಕಿನ ಮಾಣಿಹೊಳೆ(ಅಘನಾಶಿನಿ) ತುಂಬಿ ಹರಿಯುತ್ತಿದ್ದು ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾರ ಹಾನಿಯುಂಟಾಗಿದೆ.

ಸಿದ್ದಾಪುರ ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕರ್ಜಗಿಯ ನಿವಾಸಿ ಮಹಾಬಲೇಶ್ವರ ಗೌಡ ಅವರ ಮನೆ ಮಾಣಿಹೊಳೆಯ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಕುಟುಂಬಸ್ಥರು ನಿರ್ಗತಿಕರಾಗಿದ್ದಾರೆ.

RELATED ARTICLES  ಶಿರಸಿಯಲ್ಲಿ ಮತ್ತೊಮ್ಮೆ ಕಳ್ಳರ ಕೈಚಳಕ; ಮೊಬೈಲ್ ಅಂಗಡಿಗೆ ಖನ್ನ

ಬಡ ಕೃಷಿಕುಟುಂಬದವರಾದ ಅವರ ಬಳಿ ಉಟ್ಟಬಟ್ಟೆಯನ್ನು ಬಿಟ್ಟರೆ ಉಳಿದೆಲ್ಲವೂ ನದಿಯಪಾಲಾಗಿ ದಿಕ್ಕೊತೋಚದಂತಾಗಿದೆ. ಆದ್ದರಿಂದ ಸರ್ಕಾರ, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಸಂಘಸಂಸ್ಥೆಗಳು, ದಾನಿಗಳು ಪರಿಹಾರ ನೀಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯ ನೀಡಬೇಕೆಂದು ವಿನಂತಿಸಿಕೊಳ್ಳಲಾಗಿದೆ.

RELATED ARTICLES  ಗುಡಿಗಾರಗಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಮೆಟ್ರಿಕ್ ಮೇಳ.