ಯಲ್ಲಾಪುರ: ಮಳೆಯ ಆರ್ಭಟಕ್ಕೆ ಯಲ್ಲಾಪುರ ತಾಲೂಕಿನ ವಿವಿಧೆಡೆ ಅಪಾರ ಹಾನಿ ಉಂಟಾಗಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿ ಜನ ಸಂಕಷ್ಟದಲ್ಲಿದ್ದಾರೆ. ಈಗಿನ ಕಳಚೆ ಗ್ರಾಮದ ಅನೇಕ ಮನೆಗಳಿಗೆ ಹಾನಿಯಾಗಿತ್ತು ಸಂಪರ್ಕಕ್ಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳಚೆ ಸಮೀಪ ಮನೆಯೊಂದರ ಬಳಿ ಭೂಕುಸಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಹಣತೆ ಬೆಳಕಿನಲ್ಲಿ ರಮ್ಜಾನ್ ಕವಿಗೋಷ್ಠಿ ಕರ್ನಾಟಕಕ್ಕೇ ಮಾದರಿ : ಡಾ. ಷರೀಫ್

ದೇವಕಿ ನಾರಾಯಣ ಗಾಂವ್ಕಾರ್ ಎನ್ನುವವರೇ ಭೂಕುಸಿತದಿಂದ ಸಾವನ್ನಪಿದ ಮಹಿಳೆ ಎನ್ನಲಾಗಿದೆ. ಭೂಕುಸಿತದಿಂದ ಐದು ಜನ ತೊಂದರೆಗೆ ಸಿಲುಕಿಕೊಂಡಿದ್ದರು ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಂಬಿ ಹರಿಯುತ್ತಿದ್ದ ಸೇತುವೆ ದಾಟುತ್ತಿರುವ ನೀರಿನ ರಭಸಕ್ಕೆ ಹಾಸಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ನದಿಯಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

RELATED ARTICLES  ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಇನ್ನಿಲ್ಲ: ಕಳಚಿದ ಮೇರು ಭಾಗವತರ ಪರಂಪರೆಯ ಕೊಂಡಿ.

ಗುಳ್ಳಾಪುರ ಸೇತುವೆ ಕುಸಿದು ಶೇವ್ಕಾರ್, ಹಳವಳ್ಳಿ , ಕೋನಾಳ, ಕಲ್ಲೇಶ್ವರ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಮಳೆಯ ಆರ್ಭಟದಿಂದ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಜನರು ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.