ಅಂಕೋಲಾ: ಉತ್ತರಕನ್ನಡದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಾಲೂಕು ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸುರಿದ ಬಾರಿ ಮಳೆಯಿಂದ ಗಂಗಾವಳಿ ನದಿ ನೀರಿನ ಮಟ್ಟ ಹೆಚ್ಚಿದ್ದು ನದಿ ಪಾತ್ರದ ಬಹುತೇಕ ಗ್ರಾಮಗಳು ಜಲಾವೃತವಾಗಿ ಅಪಾರ ಹಾನಿಯಾಗಿದೆ.

ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆಯೊಂದು,ಉಕ್ಕೇರಿದ ಗಂಗಾವಳಿ ನದಿ ಹರಿವಿನ ರಭಸಕ್ಕೆ,ಭಾಗಶಹ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಹಳವಳ್ಳಿ, ಕಮ್ಮಾಣಿ, ಶೇವಕಾರ ಸೇರಿದಂತೆ ಹತ್ತಾರು ಹಳ್ಳಿಗಳ 3000 ಕ್ಕೂ ಹೆಚ್ಚು ಜನ ರಸ್ತೆ ಸಂಪರ್ಕ ಇಲ್ಲದೇ ಅತಂತ್ರ ವಾಗುವಂತೆ ಮಾಡಿದೆ.

RELATED ARTICLES  ಬನ್ನೇರುಘಟ್ಟ: ಬಿಳಿ ಹುಲಿಗೆ ಆಹಾರ ನೀಡಲು ತೆರಳಿದ್ದವರೆ ಹುಲಿಗೆ ಆಹಾರವಾದ್ರು!

ಈಗಾಗಲೇ ಕೋನಾಳ,ಕಲ್ಲೇಶ್ವರ,ವೈದ್ಯಹೆಗ್ಗಾರ ಮತ್ತಿತರೆಡೆಯ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ತೆರೆದು ನಾಗರಿಕ ಸುರಕ್ಷತೆಗೆ ಒತ್ತು ನೀಡಲಾಗಿದೆ. ಆದರೆ ಈ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಸೇತುವೆ ಕಡಿದಿರುವುದು ಜನತೆಗೆ ಸಮಸ್ಯೆಯಾಗಿದೆ.

ಮಳಲಗಾಂವ್ ಸೇತುವೆ ದುಸ್ಥಿತಿಯಲ್ಲಿರುವ ಕಾರಣ ಬದಲಿ ಮಾರ್ಗ ಬಳಕೆಗೂ ಜನರಿಗೆ ಸಮಸ್ಯೆಯಾಗಿದೆ. ಈ ಬಾರಿ ರಾ.ಹೆ ಸುಂಕಸಾಳ ಬಳಿ  ಹೆದ್ದಾರಿಗೆ ನುಗ್ಗಿದ ಹೆಚ್ಚಿನ ಪ್ರಮಾಣದ ನೀರಿನಿಂದ ಸಂಚಾರ ಸಮಸ್ಯೆಗೆ ತೀವ್ರ ವ್ಯತ್ಯಯವಾಗಿ,ಹೆದ್ದಾರಿ ಸಂಚಾರ ದಿನಗಟ್ಟಲೆ ಬಂದಾಗಿತ್ತು. ಕಳೆದ ಸಾಲುಗಳಲ್ಲಿ ನೆರೆಯಿಂದ ರಾಮನಗುಳಿ ತೂಗು ಸೇತುವೆಯೂ ಕೊಚ್ಚಿ ಹೋಗಿತ್ತು. ನದಿನೀರಿನ ರಭಸಕ್ಕೆ ದೋಣಿ ನಡೆಸುವುದು ಕಷ್ಟಸಾಧ್ಯವಾಗಿದೆ.

RELATED ARTICLES  ಶಿರಸಿ, ಯಲ್ಲಾಪುರದಲ್ಲಿ ನಾಳೆ ಎಲ್ಲೆಲ್ಲಿ ಲಸಿಕಾಕರಣ ಗೊತ್ತಾ?

ಅನಾರೋಗ್ಯ ಮತ್ತಿತರ ಪರಿಸ್ಥಿತಿಗಳಲ್ಲಿ ಜನರನ್ನು ಆಸ್ಪತ್ರೆಗೆ ಕರೆತರಲು ಸಹ ಹೆಣಗಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಮತ್ತು ರಸ್ತೆ ಸಂಪರ್ಕ ಕೊರತೆಯಿಂದ ನೆರೆಪೀಡಿತರಿಗೆ ನೆರವು ನೀಡಲು ಗ್ರಾಪಂ  ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಹಿನ್ನಡೆಯಾಗುತ್ತಿದೆ.