ಕುಮಟಾ: ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಉಂಟಾದ ಗೊಂದಲ ಪ್ರತಿಭಟನೆ ಹಾಗೂ ಸಾಕಷ್ಟು ಮಾತಿನ ಚಕಮಕಿಯ ಮೂಲಕ ಮುನ್ನಡೆಯಿತು.

ಕಾರ್ಮಿಕರ ಕಾರ್ಡ್ ಹೊಂದಿದ 100 ಮಂದಿಗೆ ಮೊದಲ ದಿನ ಶಾಸಕರ ಮೂಲಕ ಕಿಟ್ ನೀಡುವ ಕಾರ್ಯಕ್ರಮವನ್ನು ಹವ್ಯಕ ಸಭಾಭವನದಾಲ್ಲಿ ಹಮ್ಮಿಕೊಂಡಿತ್ತು. ಆದರೆ, ಸಾವಿರಾರು ಮಂದಿ ಬಂದ ಕಾರಣ ಎಲ್ಲರಿಗೂ ಕಿಟ್ ಹಂಚಲಾಗದೆ ಗೊಂದಲವುಂಟಾಗಿ ತನ್ಮೂಲಕ ಅದು ಪ್ರತಿಭಟನೆಯ ಹಾದಿ ಹಿಡಿಯಿತು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದರು. ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಸೂರಜ್ ನಾಯ್ಕ, ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಕೊಡುವ ಆಹಾರ ಕಿಟ್ ವಿತರಿಸುವಲ್ಲಿ ತಾರತಮ್ಯ ಆಗುತ್ತಿದೆ ಎಂಬುದನ್ನು ಆರೋಪಿಸಿ ಪ್ರತಿಯೊಂದು ಸರ್ಕಾರದ ಯೋಜನೆಯಲ್ಲಿ ಸ್ವಜನಪಕ್ಷಪಾತ ಹಾಗೂ ಬೃಷ್ಟಾಚಾರ ಮಾಡುತ್ತಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

RELATED ARTICLES  ಬಿ.ಎಡ್ ನಲ್ಲಿ ಅಕ್ಕ ತಮ್ಮನ ಸಾಧನೆ : ಅಕ್ಕ ಪ್ರಥಮ - ತಮ್ಮ ದ್ವಿತೀಯ : ಅದ್ವತೀಯ ಸಾಧನೆಗೆ ಅಭಿನಂದನೆ.

ಹಿಂದಿನ ಬಾರಿಯೂ ಕಾರ್ಮಿಕರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ಕಾರ್ಯ ವಾಗಿಲ್ಲ. ಈ ವರ್ಷವೂ ಕೂಡ ಹಂಸಕ್ಷೀರ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಎಲ್ಲರೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಬಿಟ್ಟು ಕಿಟ್ ಪಡೆಯಲು ಬಂದಿದ್ದಾರೆ. ಆದರೆ, ಕೇವಲ ನೂರೇ ಜನರಿಗೆ ಎಂಬ ಕಾರಣ ಹೇಳಿ ಉಳಿದ ಕಾರ್ಮಿಕರಿಗೆ ಅನ್ಯಾಯ ಮಾಡುವುದು ಖಂಡನೀಯ ಎಂದರು.

ನೂರೇ ಜನರಿಗೆ ನೀಡುವುದಿದ್ದರೆ ಇಲಾಖೆಯು ಮೊದಲೇ ನಿರ್ದಿಷ್ಟ ಪ್ರದೇಶದ ಜನರನ್ನು ಆಯ್ದುಕೊಂಡು ಅವರಿಗಷ್ಟೇ ಸೀಮಿತ ಕಾರ್ಯಕ್ರಮ ಆಯೋಜಿಸಬೇಕಿತ್ತು ಎಂದ ಅವರು ತಾಲ್ಲೂಕಿನಲ್ಲಿ 10 ಸಾವಿರ ಕಾರ್ಡ್ ದಾರರಿದ್ದು 8 ಸಾವಿರ ಕಾರ್ಡ್ ಗಳು ಸಕ್ರಿಯವಾಗಿವೆ. ಅವರೆಲ್ಲರಿಗೂ ಒಂದು ದಿನ, ಸ್ಥಳವನ್ನು ಗುರುತು ಮಾಡಿ ಕಿಟ್ ಕೊಡುವ ವ್ಯವಸ್ಥೆ ಮಾಡಬೇಕು. ಜೊತೆಗೆ ಇಂದು ಇಲ್ಲಿ ಬಂದವರಿಗೆ ಕಿಟ್ ನೀಡುವವರೆಗೂ ನಾವಿಲ್ಲಿಂದ ಏಳುವುದಿಲ್ಲ ಎಂದು ಪಟ್ಟು ಹಿಡಿದರು.

RELATED ARTICLES  ಏಕಾಏಕಿ ಪಲ್ಟಿಯಾದ ಕಾರು

ಪಿಎಸ್ಸೈ ಆನಂದಮೂರ್ತಿ ಅವರು ಪ್ರತಿಭಟನಾ ನಿರತರ ಬಳಿ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಇಷ್ಟೆಲ್ಲಾ ಮಂದಿ ಸೇರುವುದು ತಪ್ಪು. ಜೊತೆಗೆ ಎಲ್ಲರಿಗೂ ಆಯಾ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಕಿಟ್ ನೀಡುತ್ತೇವೆ ಎಂದು ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ಹಾಗಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ನಟಿಸಿದರಾದರೂ ಕೆಲವೊಂದು ಅದೇ ರೀತಿಯಾಗಿ ಒಂದಲ್ಲ ಮುಂದುವರೆದಿತ್ತು ಈ ಸಂದರ್ಭದಲ್ಲಿ ಮಂಜು ಜೈನ್, ಶಂಕರ್ ಉಪ್ಪಾರ್ ಇನ್ನಿತರ ಪ್ರಮುಖರು ಹಾಜರಿದ್ದರು.