ಕುಮಟಾ : ಇತ್ತೀಚೆಗೆ ದೈವಾಧೀನರಾದ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಅವರಿಗೆ ಗೌರವ ನಮನ ಕಾರ್ಯವನ್ನು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ದಿನಾಂಕ 24 ಜುಲೈ 2021 ರಂದು ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿಯ ವಿಶ್ವಸ್ಥರು ಹಾಗೂ ಎಲ್ಲಾ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಿಗೆ ನಮನ ಸಲ್ಲಿಸಿದರು.

ಗುರುಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಅಗಲಿದ ಮಹಾನ್ ಚೇತನಕ್ಕೆ ನುಡಿನಮನ ಸಲ್ಲಿಸಲಾಯಿತು ಸಂಸ್ಥೆಯ ಅಧ್ಯಕ್ಷರಾದ ವಿಠಲ ನಾಯಕ ರವರು ಗೌರವಾನ್ವಿತ ಕಾರ್ಯದರ್ಶಿಯವರಾದ ಮುರಳೀಧರ ಪ್ರಭು ರವರು ವಿಶ್ವಸ್ಥರಾದ ಡಿ ಡಿ ಕಾಮತರವರು ಮುಖ್ಯಾಧ್ಯಾಪಕಿಯವರಾದ ಸುಮಾ ಪ್ರಭು,ಜಯಾ ಶಾನಭಾಗ, ವಿನಯಾ ನಾಯಕ ,ಶಿಕ್ಷಕ ಗಣೇಶ ಜೋಶಿ ಇವರುಗಳು ಗುರುಗಳನ್ನು ಸ್ಮರಿಸಿ ಅವರ ವಿಶೇಷವಾದ ವ್ಯಕ್ತಿತ್ವದಕುರಿತು ಮಾತನಾಡಿದರು.ಉಪನ್ಯಾಸಕಿ ಗಾಯತ್ರಿ ಕಾಮತ್ ಗುರುಗಳ ಬಗ್ಗೆ ಕವನ ಬರೆದು ವಾಚಿಸಿದರು.ಉಪನ್ಯಾಸಕ ಪದ್ಮನಾಭ ಪ್ರಭು ಅವರು ಗುರುವಿನ ಕುರಿತಾದ ಭಜನೆ ಗೈದರು.

RELATED ARTICLES  ನಾಪತ್ತೆಯಾದ ಮೀನುಗಾರರನ್ನು ಹುಡುಕುವ ಎಲ್ಲಾ ವಿಧದ ಪ್ರಯತ್ನ ನಡೆಯುತ್ತಿದೆ: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್

ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಅವರು ಪ್ರಾರ್ಥಿಸಿದರು ಶಿಕ್ಷಕ ಚಿದಾನಂದ ಭಂಡಾರಿ ಕಾಗಾಲ ಅವರು ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ ವಿಸ್ವಸ್ಥರುಗಳಾದ ಅಶೋಕಪ್ರಭು, ದಾಸ ಆರ್ ಶಾನಭಾಗ,ಗಜಾನನ ಕಿಣಿ, ಸಲಹೆಗಾರರಾದ ಆರ್ ಎಚ್ ದೇಶಭಂಡಾರಿ,ವಿಧಾತ್ರಿ ಅಕಾಡೆಮಿಯ ಗುರುರಾಜ್ ಶೆಟ್ಟಿಯವರು ಪ್ರಾಂಶುಪಾಲರಾದ ಮಹೇಶ ಉಪ್ಪೀನ ,ಸುಜಾತಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯವನ್ನು ಅಂತರ್ಜಾಲ ಮಾಧ್ಯಮದ ಮೂಲಕ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ವೀಕ್ಷಿಸಿದರು.

RELATED ARTICLES  ರಾಜಕೀಯ ಮಾಡುವುದಾದರೆ ಜನ ಮೆಚ್ಚುವ ರೀತಿಯಲ್ಲಿ ಮಾಡಬೇಕು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ