ಕುಮಟಾ : ಹಿರೇಗುತ್ತಿಯ ಹಮ್ಮು ಅನಂತ ಪಟಗಾರ ವಯಸ್ಸು 61 ಇಂದು ಮಣಿಪಾಲ ದಲ್ಲಿ ಹೃದಯ ಘಾತದಿಂದ ನಿಧನರಾದರು. ಎಂದು ತಿಳಿಸಲು ವಿಷಾದಿಸುತ್ತೇವೆ. ಇವರು ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿಯಾಗಿದ್ದರು. ಹಿರೇಗುತ್ತಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ನೀಲೇಶ್ವರ ಗಣೇಶೋತ್ಸವ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ ದೇವರಬೊಳೆ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರು ಆಗಿದ್ದರು. ಅನೇಕ ಜನಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಅವರ ಅಂತ್ಯ ಸಂಸ್ಕಾರ ಇಂದು ರಾತ್ರಿ 9:00 ಘಂಟೆ ಗೆ ಹಿರೇಗುತ್ತಿ ಯಲ್ಲಿ ನಡೆಯಲಿದೆ ಮೃತರು ಹೆಂಡತಿ. ಇಬ್ಬರು ಗಂಡುಮಕ್ಕಳು ಬಂಧು ಬಳಗ ದವರನ್ನು ಅಗಲಿದ್ದಾರೆ.

RELATED ARTICLES  ಕುಮಟಾ ಬಿಜೆಪಿ ಪ್ರಮುಖರು ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಮೃತರ ಮನೆಗೆ ಬಿಜೆಪಿ ಮುಖಂಡರಾದ ರಾಮು ಕೆಂಚನ್. ನೀಲಕಂಠ ಎನ್.ನಾಯಕ.ಎನ್ ರಾಮು ಹಿರೇಗುತ್ತಿ ಚಂದ್ರಶೇಖರ ಪಟಗಾರ. ಗಜಾನನ ಕಾಮತ್. ಗೌರೀಶ ಗೌಡ ಹಾಗೂ ಅನೇಕ ಸ್ನೇಹಿತರು ಭೇಟಿ ನೀಡಿ ಸಾಂತ್ವನ ಹೇಳಿದರು.

RELATED ARTICLES  ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿ ಗೋವಿಂದ ನಾಯ್ಕ

ಶಾಸಕರು ದಿನಕರ ಕೆ ಶೆಟ್ಟಿ. ಹೊನ್ನಪ್ಪ ಎನ್ ನಾಯಕ. ಶಾಂತಾ ಎನ್ ನಾಯಕ ಹೇಮಂತ ಕುಮಾರ.ವಿನೋದ ಪ್ರಭು ಟಿ.ಬಿ.ಪಟಗಾರ.ಸಂತಾಪ ಸೂಚಿಸಿದ್ದಾರೆ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ದೇವರು ಅವರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ.