ಹೊನ್ನಾವರ : ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಭಾಂಗಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಕಳೆದ ವರ್ಷದ ಪ್ರತಿಭಾಸಂಪನ್ನರಿಗೆ ಶಿಷ್ಯವೇತನ ಪುರಸ್ಕಾರ ಪ್ರದಾನ ಮಾಡಲಾಯಿತು.ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿಯಾದ ಶ್ರೀ ಕೃಷ್ಣಮೂರ್ತಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ,ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿ ವಿದ್ಯೆಗೆ ಭೂಷಣವಾಗಿದೆ ಎಂದರು.ಕಲಿತ ಶಾಲೆ,ಋಣ ತೀರಿಸಲಾರದ ತಂದೆ,ತಾಯಿ ಮತ್ತು ಸಮಾಜವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಶಾಲೆಗೆ 10000/- ದೇಣಿಗೆ ನೀಡಿದರು.
ಶಾಲೆಯ ಇತಿಹಾಸದ 10 ನೇ ತರಗತಿಯ ದಾಖಲೆಯ ಫಲಿತಾಂಶವನ್ನು ಮುರಿದ ಮತ್ತು ಜಿಲ್ಲೆಗೆ 8 ನೇ ಸ್ಥಾನ ಪಡೆದ ಕುಮಾರ ಅಮಿತ ಪೈಗೆ ಶ್ರೀ ಜಿ.ಜಿ.ಭಟ್ಟ, ಗದ್ದೆಯವರು 20000/- ಶಿಷ್ಯವೇತನ ನೀಡಿದರು.ಹೀಗೆ ಶಾಲೆಯ ವಿಧ್ಯಾಭಿಮಾನಿಗಳು ನೀಡಿದ ಶಿಷ್ಯವೇತನ ಪುರಸ್ಕಾರವನ್ನು ಸುಮಾರು 20 ವಿದ್ಯಾರ್ಥಿಗಳು ಪಡೆದರು.ಕುಮಾರ ಚರಣ,ಕುಮಾರಿ ಮೇಘಾ,ಪೂರ್ಣಿಮಾ ಅನಿಸಿಕೆ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಡಿ ಎಸ್ ಆರ್.ಟಿ ಸಿ ನಡೆಸುವ ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ ಶ್ರೀ ಗಜಾನನ ಹೆಗಡೆಯವರು ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಮ್.ಕೆ.ಭಟ್ಟ, ಶ್ರೀಮತಿ ದುರ್ಗಾಬಾಯಿ ಜೋಷಿ ಆಶೀರ್ವಚನ ಮಾಡಿ ಉತ್ತಮ ಭವಿಷ್ಯದ ಸೂತ್ರ ತಿಳಿಸಿದರು.ಶ್ರೀ ಜಿ.ಕೆ.ಭಟ್ಟರವರು ಸ್ವಾಗತಿಸಿದರು. ಮುಖ್ಯಾಧ್ಯಾಪಕರಾದ ಶ್ರೀ ಎಲ್.ಎಮ್.ಹೆಗಡೆಯವರು ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.ಶ್ರೀ ಸುಬ್ರಹ್ಮಣ್ಯ ಭಟ್ಟರು ವಿದ್ಯಾರ್ಥಿಗಳಿಗೆ ಶುಭಾಶಂಸನೆಗೈದರು.ಶ್ರೀಮತಿ ಮುಕ್ತಾ ನಾಯ್ಕ ಮತ್ತು ಶ್ರೀಮತಿ ಸೀಮಾ ಭಟ್ಟರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರೇಷ್ಮಾ ದೇಶಭಂಡಾರಿಯವರು ವಂದಿಸಿದರು.